ಅಜಂಗಢ: ಮೊಬೈಲ್ನಲ್ಲಿ ಮಗ ಲೂಡೋ ಆಡುತ್ತಿದ್ದನ್ನು ಕಂಡ ತಂದೆ ಆತನನ್ನು ಸಾಯೋವರೆಗೂ ಥಳಿಸಿ, ನಂತರ ನದಿಯ ದಡದಲ್ಲಿ ಹೂತು ಹಾಕಿರುವ ಘಟನೆ ಉತ್ತರ ಪ್ರದೇಶದ ಅಜಂಗಢದ ಮಹುಲಾ ಬಗೀಚಾ ಗ್ರಾಮದಲ್ಲಿ ನಡೆದಿದೆ.
ಲಕ್ಕಿ (8) ಮೃತ ಬಾಲಕ. ಜೂನ್ 4 ರಂದು ಲಕ್ಕಿ ಕುರಿ ಮೇಯಿಸಲು ಹೋಗಿದ್ದಾಗ ಮೊಬೈಲ್ನಲ್ಲಿ ಲೂಡೋ ಆಡುತ್ತಿದ್ದ. ಇದನ್ನು ಕಂಡ ತಂದೆ ಜಿತೇಂದ್ರನಿಗೆ ಕೋಪ ನೆತ್ತಿಗೇರಿದ್ದು, ಮಗನನ್ನು ಸಾಯುವವರೆಗೂ ಥಳಿಸಿದ್ದಾನೆ.
ಬಳಿಕ ಕತ್ತಲಾಗುತ್ತಿದ್ದಂತೆ ಜಿತೇಂದ್ರ ತನ್ನ ಸಹೋದರ ಉಪೇಂದ್ರ ಮತ್ತು ನೆರ ಮನೆಯ ರಾಮಜನಮ್ ಸಹಾಯದಿಂದ ಬಾಲಕನ ದೇಹವನ್ನು ಗೋಣಿಚೀಲದಲ್ಲಿ ಇರಿಸಿ ಮಹುಲಾ ದೇವರ್ ಗ್ರಾಮದ ಘಾಘ್ರಾ ನದಿಯ ದಡದಲ್ಲಿ ಹೂತುಹಾಕಿದ್ದಾನೆ.
Advertisement. Scroll to continue reading.
ಈ ಬಗ್ಗೆ ಯಾರಿಗೂ ಹೇಳದಂತೆ ಪತ್ನಿಗೂ ಕೊಲೆ ಮಾಡುವುದಾಗಿ ಜಿತೇಂದ್ರ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ.
ಘಟನೆಯ ಬಗ್ಗೆ ತಿಳಿದ ಲಕ್ಕಿಯ ಅಜ್ಜಿ ಪೊಲೀಸರಿಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಹೊರ ತೆಗೆದಿದ್ದಾರೆ. ಜಿತೇಂದ್ರನನ್ನು ಬಂಧಿಸಿದ್ದಾರೆ.
Advertisement. Scroll to continue reading.