ರಾಷ್ಟ್ರೀಯ

ಡ್ರಗ್ಸ್ ಸೇವನೆ ಆರೋಪ; ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ಧಾಂತ್ ಕಪೂರ್ ಬಂಧನ

1

ಬೆಂಗಳೂರು : ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಪುತ್ರ ಸಿದ್ಧಾಂತ್ ಕಪೂರ್ ಅವರನ್ನು ಭಾನುವಾರ ರಾತ್ರಿ ನಡೆದ ಪಾರ್ಟಿಯೊಂದರಲ್ಲಿ ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಖಚಿತ ಸುಳಿವಿನ ಮೇರೆಗೆ ಪೊಲೀಸರು ಎಂ.ಜಿ.ರಸ್ತೆಯ ಹೋಟೆಲ್ ಒಂದರ ಮೇಲೆ ದಾಳಿ ನಡೆಸಿದ್ದಾರೆ.

ಈ ವೇಳೆ ಡ್ರಗ್ಸ್ ಸೇವಿಸಿ ಮತ್ತಿನಲ್ಲಿದ್ದ ಶ್ರದ್ಧಾ ಕಪೂರ್ ಅವರ ಸಹೋದರ ಸಿದ್ಧಾಂತ್ ಕಪೂರ್ ಸೇರಿದಂತೆ 6 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಬಂಧನದ ಬಳಿಕ 6 ಮಂದಿಯನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು, ವರದಿಯಲ್ಲಿ ಸಿದ್ಧಾಂತ್ ಕಪೂರ್ ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

Advertisement. Scroll to continue reading.

ಸಿದ್ಧಾಂತ್ ಕಪೂರ್ 2020 ರ ವೆಬ್ ಸರಣಿ ‘ಭೌಕಾಲ್’ ನಲ್ಲಿ ಪಾತ್ರವಾಗಿದ್ದರು. ಅಲ್ಲದೆ, ‘ಶೂಟೌಟ್ ಅಟ್ ವಡಾಲಾ’, ‘ಅಗ್ಲಿ’, ‘ಹಸೀನಾ ಪಾರ್ಕರ್’, ‘ಚೆಹ್ರೆ’ ಚಿತ್ರದಲ್ಲಿ ನಟಿಸಿದ್ದು, ‘ಭಾಗಂ ಭಾಗ್’, ‘ಚುಪ್ ಚುಪ್ ಕೆ’, ‘ಭೂಲ್ ಭುಲೈಯಾ’, ಮತ್ತು ‘ಧೋಲ್’ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com