ಭಾರತೀಯ ಜೀವವಿಮಾ ನಿಗಮ ಬ್ರಹ್ಮಾವರ ಶಾಖೆಯಲ್ಲಿ 50 ವರ್ಷ ಸೇವೆ ಸಲ್ಲಿಸಿದ ವೈ.ಗಣೇಶ್ ಭಟ್ ದಂಪತಿಗೆ ಸನ್ಮಾನ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಭಾರತೀಯ ಜೀವವಿಮಾ ನಿಗಮ, ಬ್ರಹ್ಮಾವರ ಶಾಖೆಯಲ್ಲಿ 50 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ 8000 ಪಾಲಿಸಿ ಮಾಡಿ, ಮತ್ತು 76ರ ಅವರ ಇಳಿ ವಯಸ್ಸಿನಲ್ಲಿ ಕೂಡಾ ಮಾರ್ಚ್ 1 ತಿಂಗಳಿನಲ್ಲಿ 52 ಪಾಲಿಸಿಯ ದಾಖಲೆ ಮಾಡಿದ ಭಾರತೀಯ ಜೀವವೀಮಾ ನಿಗಮದ ಪ್ರತಿನಿಧಿ ವೈ. ಗಣೇಶ್ ಭಟ್ ಮತ್ತು ಪತ್ನಿ ಇಂದಿರಾ ದಂಪತಿಯನ್ನು ಇಲಾಖೆ ವತಿಯಿಂದ ಕಛೇರಿಯಲ್ಲಿ ಮತ್ತು ಅವರ ಮನೆಯಲ್ಲಿ ಸನ್ಮಾನಿಸಲಾಯಿತು.
ಉಡುಪಿ ವಿಭಾಗ ಸೇಲ್ಸ್ ಮ್ಯಾನೇಜರ್ ಕೆ ಸದಾಶಿವ ಭಟ್, ಪ್ರೊಡಕ್ಷನ್ ಮ್ಯಾನೇಜರ್ ಪಾಂಡುರಂಗ ಪೈ, ಶಾಖಾಧಿಕಾರಿ ಬಿ.ಏ ಪ್ರದೀಪ್, ಉಪಶಾಖಾಧಿಕಾರಿ ಶ್ರೀರಾಮ್ ಮಲ್ಲಿಕಾರ್ಜುನ್ , ಅಭಿವೃದ್ಧಿ ಅಧಿಕಾರಿ ದೇವಾನಂದ್, ಭಾರತೀಯ ಜೀವವೀಮಾ ನಿಗಮದ ಬ್ರಹ್ಮಾವರ ಶಾಖೆಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದು, ಶುಭ ಹಾರೈಸಿದರು.