ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡನೇ ದಿನದ ವಿಚಾರಣೆಗಾಗಿ ನವದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರೆಸಲು ಇಡಿ ನಿನ್ನೆ ಮತ್ತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸಮನ್ಸ್ ನೀಡಿತ್ತು.
ಇದರಿಂದಾಗಿ ರಾಹುಲ್ ಗಾಂಧಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಇಂದು ಕೂಡಾ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದ್ದಾರೆ.
Advertisement. Scroll to continue reading.
ನಿನ್ನೆ ರಾಹುಲ್ ವಿಚಾರಣೆಗಾಗಿ ಮೊದಲ ಬಾರಿಗೆ ಇಡಿ ಮುಂದೆ ಹಾಜರಾಗಿದ್ದರು. ಸೋಮವಾರ ವಿಚಾರಣೆಯು ರಾತ್ರಿ 11 ಗಂಟೆ ವರೆಗೆ ನಡೆದಿದ್ದು, ಬಳಿಕ ಅವರು ಇಡಿ ಕಚೇರಿಯಿಂದ ನಿರ್ಗಮಿಸಿದ್ದರು.
ಇನ್ನು ಈ ಸಂಬಂಧ ರಾಹುಲ್ ಮನೆಯಿಂದ ಇಡಿ ಕಚೇರಿ ವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
Advertisement. Scroll to continue reading.