100 ನೇ ವರ್ಷಕ್ಕೆ ಕಾಲಿಟ್ಟ ಪ್ರಧಾನಿ ಮೋದಿ ತಾಯಿ ಹೀರಾಬೆನ್; ‘ಸರಳ, ಅಸಾಮಾನ್ಯ ಮಹಿಳೆ’ ಭಾವನಾತ್ಮಕ ಪತ್ರ ಬರೆದ ಮೋದಿ
Published
1
ಗುಜರಾತ್ : ಇಂದು ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರಿಗೆ 100ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಇಂದು ಮುಂಜಾನೆ ಪ್ರಧಾನಿ ಮೋದಿ ಅವರು ತಮ್ಮ ತಾಯಿಯನ್ನು ಗಾಂಧಿನಗರದಲ್ಲಿರುವ ಅವರ ನಿವಾಸಕ್ಕೆ ತೆರಳಿ ತಾಯಿಯ 100 ನೇ ಹುಟ್ಟುಹಬ್ಬವನ್ನು ಆಚರಿಸಿದರು.
ಅಲ್ಲದೇ, ಮೋದಿಯವರು ತಾಯೊಯೊಂದಿಗಿನ ತಮ್ಮ ಜೀವನವನ್ನು ನೆನಪಿಸಿಕೊಳ್ಳುವ ಹೃದಯಸ್ಪರ್ಶಿ ಪತ್ರ ಬರೆದಿದ್ದಾರೆ.
ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ‘ಮಾ (ಅಮ್ಮ)’ಎಂಬುದು ಕೇವಲ ಪದವಲ್ಲ… ಆದರೆ ಇದು ಭಾವನೆಗಳ ವ್ಯಾಪ್ತಿಯನ್ನು ಸೆರೆ ಹಿಡಿಯುತ್ತದೆ. ಇಂದು ಜೂನ್ 18 ನನ್ನ ತಾಯಿ ಹೀರಾಬಾ 100 ನೇ ವರ್ಷಕ್ಕೆ ಕಾಲಿಡುತ್ತಿರುವ ದಿನ. ಈ ವಿಶೇಷ ದಿನದಂದು ನಾನು ಸಂತೋಷ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಕೆಲವು ಆಲೋಚನೆಗಳನ್ನು ಬರೆದಿದ್ದೇನೆ ಎಂದು ಹೇಳಿದ್ದಾರೆ.
Advertisement. Scroll to continue reading.
ತಮ್ಮ ಬ್ಲಾಗ್ನಲ್ಲಿ ಪ್ರಧಾನಿಯವರು ತಾಯಿ ಹೀರಾಬೆನ್ ಕುರಿತು ಬರೆದುಕೊಂಡಿದ್ದಾರೆ. ಅವರನ್ನು ಸರಳ, ಆದರೆ ಅಸಾಮಾನ್ಯ ಮಹಿಳೆ ಎಂದು ಬಣ್ಣಿಸಿದ್ದು, ಅವಳು ಚಿಕ್ಕವಳಿದ್ದಾಗ ತನ್ನ ತಾಯಿಯನ್ನು ಕಳೆದುಕೊಂಡಳು ಮತ್ತು ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದಳು. ಇದೆಲ್ಲವುಗಳಿಂದ ಹೆಚ್ಚು ದೃಢವಾಗಿ ಹೊರಹೊಮ್ಮಿದ್ದಾಳೆ ಎಂದಿದ್ದಾರೆ.
ಮಳೆಗಾಲದಲ್ಲಿ ನಮ್ಮ ಮೇಲ್ಛಾವಣಿ ಸೋರಿ ಮನೆಯೊಳಗೆ ನೀರು ಬರುತ್ತದೆ. ಮಳೆ ನೀರನ್ನು ಸಂಗ್ರಹಿಸಲು ತಾಯಿ ಬಕೆಟ್ ಮತ್ತು ಪಾತ್ರೆಗಳನ್ನು ಸೋರಿಕೆಯ ಕೆಳಗೆ ಇಡುತ್ತಿದ್ದರು. ಈ ಪ್ರತಿಕೂಲ ಪರಿಸ್ಥಿತಿಯಲ್ಲೂ ತಾಯಿ ಸ್ಥೈರ್ಯದ ಪ್ರತೀಕವಾಗಿದ್ದರು.
ಔಪಚಾರಿಕವಾಗಿ ಶಿಕ್ಷಣ ಪಡೆಯದೆ ಕಲಿಯಲು ಸಾಧ್ಯ ಎಂದು ಅವರ ತಾಯಿಯಿಂದ ಅರಿತುಕೊಂಡೆ. ‘ಅವಳ ಆಲೋಚನಾ ಪ್ರಕ್ರಿಯೆ ಮತ್ತು ದೂರದೃಷ್ಟಿಯ ಚಿಂತನೆಯು ಯಾವಾಗಲೂ ನನ್ನನ್ನು ಆಶ್ಚರ್ಯಗೊಳಿಸುತ್ತದೆ’ ಎಂದು ಅವರು ಹೇಳಿದ್ದಾರೆ.
ತಮ್ಮ ತಾಯಿಯ ಅತ್ಯಂತ ಸರಳ ಜೀವನಶೈಲಿಯನ್ನು ಪ್ರತಿಬಿಂಬಿಸಿದ ಪ್ರಧಾನಿ ಮೋದಿ, ಇಂದಿಗೂ ಸಹ ತಮ್ಮ ತಾಯಿಯ ಹೆಸರಿನಲ್ಲಿ ಯಾವುದೇ ಆಸ್ತಿ ಇಲ್ಲ ಎಂದು ಬರೆದಿದ್ದಾರೆ. ‘ಅವಳು ಯಾವುದೇ ಚಿನ್ನದ ಆಭರಣಗಳನ್ನು ಧರಿಸಿರುವುದನ್ನು ನಾನು ನೋಡಿಲ್ಲ ಮತ್ತು ಅವಳಿಗೆ ಆಸಕ್ತಿಯೂ ಇಲ್ಲ. ಮೊದಲಿನಂತೆಯೇ, ಅವಳು ತನ್ನ ಸಣ್ಣ ಕೋಣೆಯಲ್ಲಿ ಅತ್ಯಂತ ಸರಳವಾದ ಜೀವನಶೈಲಿಯನ್ನು ಮುಂದುವರಿಸುತ್ತಿದ್ದಾಳೆ ಎಂದು ತನ್ನ ತಾಯಿಯ ಕುರಿತು ಪ್ರಧಾನಿ ಮೋದಿ ತಿಳಿಸಿದ್ದಾರೆ.