Uncategorized

‘ಕೌನ್ ಬನೇಗಾ ಕರೋಡ್ ಪತಿ’ಯಲ್ಲಿ ಕರಾವಳಿ ಪ್ರತಿಭೆ ರವಿ ಕಟಪಾಡಿ

0

ಉಡುಪಿ : ತಮ್ಮ ಸಾಮಾಜಿಕ ಕಾರ್ಯಗಳಿಂದ ಗಮನ ಸೆಳೆದಿರುವವರು ರವಿ ಕಟಪಾಡಿ. ಅಷ್ಟಮಿಯಂದು ವಿಭಿನ್ನ ಬಗೆಯ ವೇಷ ಧರಿಸಿ ಬಂದ ಹಣವನ್ನು ಬಡವರ, ಅನಾರೋಗ್ಯ ಪೀಡಿತರ ಸಂಕಷ್ಟಗಳಿಗೆ ನೆರವಿಗೆ ಧಾರೆ ಎರೆದ ಕಲಾವಿದ. ಇಂತಿಪ್ಪ ರವಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿಯ ಸೀಟ್ ನಲ್ಲಿ ಕೂರಲಿದ್ದಾರೆ.

ಅವರ ಸಾಮಾಜಿಕ ಕಾರ್ಯ ಮನಗಂಡಿರುವ ಸೋನಿ ಟಿವಿ ಈ ಒಂದು ಅವಕಾಶವನ್ನು ಅವರಿಗೆ ಕಲ್ಪಿಸಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಮುಂಬೈಗೆ ತೆರಳಿದ್ದಾರೆ. ಅಂದಹಾಗೆ ಈ ಕಾರ್ಯಕ್ರಮ ಜನವರಿ 15 ರಂದು ಪ್ರಸಾರವಾಗಲಿದೆ.

https://diksoochinews.in/wp-content/uploads/2021/01/A-to-Z-ADD-1.mp4

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com