ಬ್ರಹ್ಮಾವರ : ಸಾಮಾಜಿಕ ಅಸಮಾನತೆ ವಿರೋಧಿ ತಂಡದಿಂದ ಪ್ರತಿಭಾ ಪ್ರದರ್ಶನ ಮತ್ತು ಜಾಗೃತಿ ಸಮಾಲೋಚನೆ ಕಾರ್ಯಕ್ರಮ
Published
4
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಚೋಸನ್ ಜನರೇಶನ್ ಚಾರಿಟೇಬಲ್ ಟ್ರಸ್ಟ್ ಮತ್ತು ಆರ್ ಜೆ ಕಾಜಲ್ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸಾಮಾಜಿಕ ಅಸಮಾನತೆ ವಿರೋಧಿ ತಂಡ ಇವರಿಂದ ಪ್ರತಿಭಾ ಪ್ರದರ್ಶನ ಮತ್ತು ಜಾಗೃತಿ ಸಮಾಲೋಚನೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರ್ನಾಟಕ ಮಂಗಳ ಮುಖಿ ಪೌಂಡೇಶನ್ ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಅರುಂಧತಿ ಹೆಗ್ಡೆ ಮಾತನಾಡಿ, ತೃತೀಯ ಲಿಂಗಿಗಳೂ ಕೂಡಾ ಮಾನವ ಸಮಾಜದವರೇ ಎನ್ನುವ ಭಾವನೆ ಹೆಚ್ಚಬೇಕು. ನಾವು ಮನೆಯವರಿಂದ ಸಮಾಜದಿಂದ ದೂರ ಇರಲು ಕಾರಣ ಮಾನವ ಸಮಾಜವೇ. ನಮಗೆ ಅನುಕಂಪ ಕರುಣೆಗಿಂತ ಬದುಕುವ ಮತ್ತು ಹೊಟ್ಟೆ ಹಸಿವಿಗಾಗಿ ತೃತೀಯ ಲಿಂಗಿಗಳು ಒಂದೊಂದು ಮಾರ್ಗ ಹಿಡಿಯುವಂತೆ ಆಗಿದೆ ಎಂದು ಹೇಳಿದರು.
Advertisement. Scroll to continue reading.
ಬ್ರಹ್ಮಾವರ ಪೋಲಿಸ್ ಠಾಣೆಯ ಪಿ ಎಸ್ ಐ ಶಾಂತರಾಜ್ , ಸಮಾಜ ಸೇವಕಿ ಆಸ್ಮಾ , ಕರ್ನಾಟಕ ರಕ್ಷಣಾ ವೇದಿಕೆಯ ಸಂತೋಷ್ , ನ್ಯಾಯವಾದಿ ಮಹ್ಮದ್ ಸುಹಾನ್ , ಎಂಜಿ ಎಂ ಕಾಲೇಜಿನ ಪ್ರತಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ್ ಕಾಮತ್ , ಹೂಡೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ ಪ್ರೀಮಾ ಲವೀನಾ ಲಸ್ರಾಡೋ , ಅಭಿಗೇಲ್ ಶಿಲ್ಡಾನ್ ಅಂಚನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅರುಂಧತಿ ಹೆಗ್ಡೆ ಯವರನ್ನು ಸನ್ಮಾನಿಸಲಾಯಿತು. ಬಳಿಕ ತೃತೀಯ ಲಿಂಗಿಗಳಿಂದ ನಾನಾ ನೃತ್ಯ ಕಾರ್ಯಕ್ರಮ ಜರುಗಿತು.