ಹುಬ್ಬಳ್ಳಿ – ಧಾರವಾಡ ಬಂಟರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಅವರಿಗೆ ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ
Published
2
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಪ್ರಾಚೀನ ದೇವಸ್ಥಾನವಾದ ಕರ್ಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಜಿರ್ಣೋದ್ಧಾರಗೊಳಿಸಿದ ಮತ್ತು ಕರ್ಜೆಯಲ್ಲಿ ಪ್ರೌಢ ಶಾಲೆ ರಚನೆಯಾಗುವಲ್ಲಿ ಶ್ರಮಿಸಿದ ಸಮಾಜ ಸೇವಕ, ದೇವಸ್ಥಾನದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿಯವರು ಹುಬ್ಬಳ್ಳಿ ಧಾರವಾಡ ಬಂಟರ ಸಂಘಕ್ಕೆ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡು ಪ್ರಥಮ ಬಾರಿಗೆ ಹುಟ್ಟೂರಿಗೆ ಆಗಮಿಸುತ್ತಿರುವ ಸಂದರ್ಭ ಭಾನುವಾರ ಬ್ರಹ್ಮಾವರ ಬಂಟರ ಸಂಘದ ಬಳಿ ಬರಮಾಡಿಕೊಳ್ಳಲಾಯಿತು.
ಬ್ರಹ್ಮಾವರ ಬಂಟರ ಸಂಘದ ಅಧ್ಯಕ್ಷ ಮೈರ್ಮಾಡಿ ಸುಧಾಕರ ಶೆಟ್ಟಿ ಮತ್ತು ಪದಾಧಿಕಾರಿಗಳು ಅವರನ್ನು ಸ್ವಾಗತಿಸಿ ಬಾರಿ ಹೂವಿನ ಹಾರ ಹಾಕಿ ಗೌರವಿಸಿದರು. ಬಳಿಕ ಕುಂಜಾಲು ಚೇರ್ಕಾಡಿ ರಸ್ತೆ ಮೂಲಕ ಕರ್ಜೆ ದೇವಸ್ಥಾನಕ್ಕೆ ಹಲವಾರು ವಾಹನಗಳ ಮೂಲಕ ಸಾಗಿ ದೇವಸ್ಥಾನಕ್ಕೆ ತಲುಪಿದರು . ದಾರಿ ಉದ್ದಕ್ಕೂ ಊರ ಅನೇಕ ಗಣ್ಯರು , ಸಾರ್ವಜನಿಕರು ಈ ಸಂದರ್ಬ ಹಾಜರಿದ್ದು ಅವರನ್ನು ಗೌರವಿಸಿದರು. ಕರ್ಜೆ ದೇವರಿಗೆ ಈ ಸಂದರ್ಬ ವಿಶೇಷ ಪೂಜೆ ನೆರವೇರಿಸಿದರು.
ದೇವಸ್ಥಾನದ ವತಿಯಿಂದ ಮತ್ತು ಊರ ಜನರ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಹುಬ್ಬಳಿಯ ಸಂಘದ ಪಧಾಧಿಕಾರಿಗಳಾದ ಜೆಕೆ ಶೆಟ್ಟಿ , ಅಶೋಕ ಶೆಟ್ಟಿ , ಶಾಂತಾರಾಮ ಶೆಟ್ಟಿ , ಶ್ರೀನಿವಾಸ ಶೆಟ್ಟಿ , ಉಲ್ಲಾಸ ಶೆಟ್ಟಿ ಇನ್ನಿತರರು ಜೊತೆಯಲ್ಲಿದ್ದರು.