ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಕೆಲವು ದಶಕಗಳ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಕರಾವಳಿಯ ಜನರು ಹೆಚ್ಚಾಗಿ ಆಕರ್ಷಿತರಾಗಿದ್ದರು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಕಡೆ ಕರಾವಳಿಗರು ಒಲವು ತೋರುತ್ತಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ಪರೀಕ್ಷೆಗಳಿಗೆ ಅಣಿಯಾಗುವಂತೆ ತಂತಿ ನಿಯಮ ರೂಪಿಸಿದಾಗ ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಸಹಕಾರ ನೀಡುವ ಪ್ರಯತ್ನ ಮಾಡಲಾಗುವುದು ಎಂದು ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕೆ ಅಡ್ಯಂತಾಯ ಹೇಳಿದರು.
ಅವರು ಕುಡಿ ಬೈಲ್ ಕುಚ್ಚೂರಿನಲ್ಲಿ ಶಾಂತಿನಿಕೇತನ ಯುವ ವೃಂದದ ನೂತನ ವಿದ್ಯಾರ್ಥಿ ಘಟಕ ವನ್ನು ಉದ್ಘಾಟಿಸಿ ಭಾನುವಾರ ಮಾತನಾಡಿದರು.
Advertisement. Scroll to continue reading.
ಶಾಂತಿನಿಕೇತನವು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಸಂಸ್ಥೆ. ಈ ಗ್ರಾಮೀಣ ಭಾಗದಲ್ಲಿ ವಿನೂತನ ಕಾರ್ಯಕ್ರಮಗಳೊಂದಿಗೆ ಪ್ರತಿಯೊಬ್ಬರ ಶ್ರೇಯಸ್ಸಿಗೂ ದುಡಿಯುತ್ತಿದೆ. ವಿದ್ಯಾರ್ಥಿಗಳ ದೆಸೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ವಿಶೇಷವನ್ನು ನೀಡಿರುವುದು ಶ್ಲಾಘನೀಯ ಎಂದು ಅಡ್ಯಂತಾಯ ಹೇಳಿದರು.
ಹೆಬ್ರಿ ಪಿಎಸ್ಐ ಸುದರ್ಶನ್ ದೊಡ್ಡಮನಿ ಮಾತನಾಡಿ, ಕರಾವಳಿಯ ಜನತೆ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಅತಿ ಶೀಘ್ರವೇ ಫಲಿತಾಂಶ ಹುಡುಕಾಟದ ಬರೆದಲ್ಲಿ ಹೆಚ್ಚಿನವರಿಗೆ ಉದ್ಯೋಗ ದೊರೆಯುತ್ತಿಲ್ಲ. ಇಲ್ಲಿಯ ಜನತೆ ತಾಳ್ಮೆಯನ್ನು ಕಾಯ್ದುಕೊಂಡು ಪರೀಕ್ಷೆಗಳಿಗೆ ಎದುರಾದಾಗ ಖಂಡಿತವಾಗಿ ಯಶಸ್ಸು ಸಿಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತಿನಿಕೇತನ ಅಧ್ಯಕ್ಷ ರಾಜೇಶ್ ವಹಿಸಿದ್ದರು.
ನೂತನ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳಿಗೆ ಹುದ್ದೆ ಹಂಚಿಕೆ ಮಾಡಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
Advertisement. Scroll to continue reading.
ರಾಷ್ಟ್ರಮಟ್ಟದ ತರಬೇತುದಾರರಾದ ಶ್ರೀ ಮುದ್ರಾಡಿ ಅವರು ನಿಮ್ಮನ್ನು ನೀವು ತಿಳಿದುಕೊಳ್ಳಿ ಎಂಬ ವಿಷಯದ ಮೇಲೆ ಕಾರ್ಯಗಾರ ನೆರವೇರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕುಚ್ಚೂರು ಗ್ರಾಮ ಪಂಚಾಯತ್ ಸದಸ್ಯ ಸುಜಾತ ಶೆಟ್ಟಿ, ಶಾಂತಿನಿಕೇತನದ ವಿಜಯಕುಮಾರ್, ಜಯಕರ, ದೀಕ್ಷಿತ್ ನಾಯಕ್, ನಾಗರಾಜ, ಶ್ರೀನಿವಾಸ್ ಶೆಟ್ಟಿ, ಮಹೇಶ್, ಗಣೇಶ್, ರಾಜಶ್ರೀ, ರೇಷ್ಮಾ, ವಿನೋದ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
Advertisement. Scroll to continue reading.