ಬ್ರಹ್ಮಾವರ : ಗುಣರಂಜನ್ ಶೆಟ್ಟಿಗೆ ರಕ್ಷಣೆ ಒದಗಿಸುವಂತೆ ಹಾಗೂ ಪಾತಕಿಗಳನ್ನು ಬಂಧಿಸುವಂತೆ ಜಯಕರ್ನಾಟಕ ಜನಪರ ವೇದಿಕೆಯಿಂದ ಮನವಿ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಪರಿಸರವಾದಿ, ಜಯ ಕರ್ನಾಟಕ ಜನಪರ ವೇದಿಕೆಯ ಸ್ಥಾಪಕ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿಯವರ ಹತ್ಯೆಗೆ ಭೂಗತ ಪ್ರಪಂಚದ ಕೆಲ ವ್ಯಕ್ತಿಗಳ ತಂಡವು ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಗುಣರಂಜನ್ ಶೆಟ್ಟಿಯವರಿಗೆ ರಕ್ಷಣೆ ಒದಗಿಸುವಂತೆ ಹಾಗೂ ಪಾತಕಿಗಳನ್ನು ಶೀಘ್ರವಾಗಿ ಬಂದಿಸುವಂತೆ ಜಯಕರ್ನಾಟಕ ಜನಪರ ವೇದಿಕೆ ಉಡುಪಿ ಜಿಲ್ಲೆ ವತಿಯಿಂದ ಸೋಮವಾರ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಜನನಿ ದಿವಾಕರ ಶೆಟ್ಟಿ , ಉಡುಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ನಿರಂಜನ ಹೆಗ್ಡೆ ಅಲ್ತಾರು, ಸುಧಾಕರ್ ರಾವ್ ಬಾರ್ಕೂರು, ನಿತ್ಯಾನಂದ ಅಮೀನ್, ಎಸ್.ಎಸ್ ತೋನ್ಸೆ, ಕರುಣಾಕರ ಪೂಜಾರಿ, ವಿಜಯ್ ಹೆಗ್ಡೆ ಕಳ್ತೂರು, ಸ್ಯಾಮ್‍ಸನ್ ಸಿಕ್ವೇರಾ ಬ್ರಹ್ಮಾವರ, ಮನೋಜ್ ಶೆಟ್ಟಿ, ಲೂಯೀಸ್ ಮಣಿಮೂಲೆ, ಸಂತೋಷ್ ಶೆಟ್ಟಿ, ಪ್ರಭಾಕರ ಶೆಟ್ಟಿ ಅಲ್ಬಾಡಿ, ಸುಶಾಂತ್ ಬ್ರಹ್ಮಾವರ ಉಪಸ್ಥಿತರಿದ್ದರು.