ಮೈಸೂರಿನಲ್ಲಿ 8 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ; ಪ್ರಧಾನಿ ಮೋದಿ ಚಾಲನೆ
Published
1
ಮೈಸೂರು : 8 ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮೈಸೂರು ಅರಮನೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಯೋಗ ಮಾತ್ರ ನಿರೋಗದಿಂದ ಬದುಕುವಂತೆ ಮಾಡುತ್ತೆ. ಯೋಗ ದಿನಾಚರಣೆ ಸುದಿನ ಮೈಸೂರಿಗೆ ಪ್ರಣಾಮ. ನಮ್ಮೆಲ್ಲರ ಜೀವನಕ್ಕೆ ವಿಶ್ವಾಸ ನೀಡುತ್ತಿರುವುದೇ ಯೋಗ. ಇಡೀ ವಿಶ್ವಕ್ಕೇ ಪಸರಿಸಿರುವ ಯೋಗದಿಂದಲೇ ವಿಶ್ವಾಸ ಎಂದರು.
ಯೋಗ ದಿನದ ವಿಶ್ವಾಸವೇ ನಮ್ಮದ ಬದುಕಿಗೂ ಪ್ರೇರಣೆ. ಮಾನವೀಯತೆಗಾಗಿ ವಿಶ್ವದ ಎಲ್ಲೆಡೆಯಲ್ಲೂ ಯೋಗ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ.ಯೋಗದಿಂದ ಎಲ್ಲರಿಗೂ ಶಾಂತಿ ಸಿಗಲಿದೆ.
Advertisement. Scroll to continue reading.
ಸಮಾಜದಲ್ಲಿ ಶಾಂತಿ, ವಿಶ್ವದ, ದೇಶದ ಶಾಂತಿಗಾಗಿ ಯೋಗ, ಪ್ರಪಂಚ ಮೂಲೆಮೂಲೆಗಳಲ್ಲಿ ಯೋಗಾಭ್ಯಸ ನಡೆಸಲಾಗುತ್ತಿದೆ. ಮಾನವೀಯತೆಗಾಗಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಯೋಗದಿಂದ ಇಡೀ ವಿಶ್ವವೇ ಒಗ್ಗೂಡುತ್ತಿದೆ. ಅಂತಾರಾಷ್ಟ್ರಿಯ ಮಟ್ಟದಲ್ಲಿ ಗಾರ್ಡಿಯನ್ ರಿಂಗ್ ಮೂಲಕ ಯೋಗ ದಿನ ಆಚರಣೆ ಮಾಡಲಾಗುತ್ತಿದೆ. ನಮ್ಮ ಜೀವನ ಯೋಗದಿಂದ ಶುರುವಾಗುತ್ತದೆ. ವಿಶ್ವದಲ್ಲಿ ರೋಗ ಮುಕ್ತಿಗಾಗಿ ಯೋಗಾಸನವೇ ಆಧಾರವಾಗಿದೆ ಎಂದು ಹೇಳಿದ್ದಾರೆ.