ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಮನೆಯವರಿಗೆ ಬೆದರಿಸಿ ಕೊಟ್ಟಿಗೆಯಿಂದ ಜಾನುವಾರು ಕಳವುಗೈದಿರುವ ಘಟನೆ ಕಬ್ಬಿನಾಲೆ ಗ್ರಾಮದಲ್ಲಿ ನಡೆದಿದೆ.
ಬಾಲ್ಚಾರಿನ ದಯಕರಗೌಡ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಮುಂಜಾನೆ 4 ಗಂಟೆ ಸಮಯಕ್ಕೆ ಕೊಟ್ಟಿಗೆಯಲ್ಲಿ ಕಟ್ಟಿದ ದನಗಳು ಕೂಗುತ್ತಿರುವುದನ್ನು ದಯಕರ ಮತ್ತು ಅವರ ಅಳಿಯ ಪ್ರಸಾದ ರವರು ಎದ್ದು ಮನೆಯಿಂದ ದನದ ಕೊಟ್ಟಿಗೆಯ ಬಳಿ ಬಂದು ಟಾರ್ಚ್ ಲೈಟ್ ನ್ನು ಬಿಟ್ಟು ನೋಡಿದಾಗ ದನದ ಕೊಟ್ಟಿಗೆಯ ಬಳಿ ಒಂದು ಕಾರು ನಿಂತುಕೊಂಡಿರುವುದು ಗಮನಕ್ಕೆ ಬಂದಿದೆ. ನಂತರ ದನದ ಕೊಟ್ಟಿಗೆಗೆ ಟಾರ್ಚ್ ನ್ನು ಬಿಟ್ಟು ನೋಡಿದಾಗ ಯಾರೋ ಮೂರು ಜನರು ಮನೆಯ ಹತ್ತಿರದ ದನದ ಕೊಟ್ಟಿಗೆಯಲ್ಲಿ ಕಟ್ಟಿದ ಮೂರು ದನಗಳ ಪೈಕಿ ಎರಡು ದನಗಳನ್ನು ಕಳವು ಮಾಡಿ ಎಳೆದುಕೊಂಡು ದಯಕರ ಮತ್ತು ಪ್ರಸಾದ ಅವರು ಜೋರಾಗಿ ಬೊಬ್ಬೆ ಹಾಕಿ, ದನಗಳನ್ನು ಬಿಡಿಸಿಕೊಳ್ಳಲು ಅವರ ಸಮೀಪ ಹೋಗುತ್ತಿರುವಾಗ ಆರೋಪಿಗಳು ನೀವು ಮುಂದೆ ಬಂದರೆ ನಿಮಗೆ ಕತ್ತಿಯಿಂದ ಕಡಿದು ಕೊಲ್ಲುವುದಾಗಿ ಕತ್ತಿಯನ್ನು ತೋರಿಸಿ ಹೆದರಿಸಿ ದನದ ಕೊಟ್ಟಿಗೆಯನ್ನು ಕಿತ್ತು ಹಾಕಿ ಕಳವು ಮಾಡಿದ್ದಾರೆ.
Advertisement. Scroll to continue reading.
ಎರಡು ದನಗಳನ್ನು ವಧೆ ಮಾಡುವ ಬಗ್ಗೆ ಕಸಾಯಿಖಾನೆಗೆ ತೆಗೆದುಕೊಂಡು ಹೋಗಲು ಅವುಗಳನ್ನು KA-20-Z -6798 Ritz ನಂಬರಿನ ಕಾರಿನಲ್ಲಿ ಹಿಂಸೆ ಆಗುವ ರೀತಿಯಲ್ಲಿ ಯದ್ವಾತದ್ವಾವಾಗಿ ತುಂಬಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಕಳುವಾದ ಎರಡು ದನಗಳ ಮೌಲ್ಯ 30,000/- ರೂಪಾಯಿ ಆಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.