ಬ್ರೆಜಿಲ್ : ತಮ್ಮ ಟಾನ್ಸಿಲ್‌ಗಳನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ರೂಪದರ್ಶಿಯೊಬ್ಬರು ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಆಕರ ಮೆದುಳಿನ ರಕ್ತಸ್ರಾವ ಮತ್ತು ಹೃದಯಾಘಾತಕ್ಕೆ ಒಳಗಾಗಿ ಕೋಮಾ ಸ್ಥಿತಿಯಲ್ಲಿದ್ದರು.
ಇದೀಗ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಗ್ಲೇಸಿ ಕೊರಿಯಾ ಮೃತ ರೂಪದರ್ಶಿ. ಈಕೆಗೆ 27 ವರ್ಷ ವಯಸ್ಸಾಗಿತ್ತು. ತಾನು 23 ವರ್ಷದವಳಿದ್ದಾಗ 2018 ರಲ್ಲಿ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಬ್ರೆಜಿಲ್ ಪ್ರಶಸ್ತಿಯನ್ನು ಗೆದ್ದಿದ್ದರು.
Advertisement. Scroll to continue reading.
ಗ್ಲೇಸಿ ಮಾರ್ಚ್ ಅಂತ್ಯದಲ್ಲಿ ಆಕೆಯ ಟಾನ್ಸಿಲ್‌ಗಳನ್ನು ತೆಗೆದುಹಾಕಲು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಆಕೆಯ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿತ್ತು. ಏಪ್ರಿಲ್ 4 ರಂದು ಹೃದಯಾಘಾತವಾಗಿತ್ತು. ಇದಾದ ಮೇಲೆ ಆಕೆ ಕೋಮಾ ಸ್ಥಿತಿಯಲ್ಲಿದ್ದಳು. ಆಕೆಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರೆಸಲಾಗಿತ್ತು. ಇದೀಗ ಕಳೆದ ಸೋಮವಾರ ನಿಧನರಾದ್ದಾರೆ ಎಂದು ವರದಿಯಾಗಿದೆ.
ಕೊರಿಯಾ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈದ್ಯಕೀಯ ಪರೀಕ್ಷಕರಿಗೆ ಕಳುಹಿಸಲಾಗಿದೆ ಎನ್ನಲಾಗಿದೆ.
Advertisement. Scroll to continue reading.