ಮಂಗಳೂರು: ಮೂರು ಮಕ್ಕಳನ್ನು ಕೊಂದು ಪತ್ನಿ ಜೊತೆ ಪತಿ ಆತ್ಮಹತ್ಯೆಗೆ ಯತ್ನಿಸಿರುವ ಮಂಗಳೂರು ತಾಲೂಕಿನ ಪದ್ಮನೂರು ಗ್ರಾಮದಲ್ಲಿ ನಡೆದಿದೆ.
ಪದ್ಮನೂರು ಗ್ರಾಮದಲ್ಲಿ ವಿಜೇತ್ ಶೆಟ್ಟಿಗಾರ್ ಎಂಬಾತ, ತನ್ನ ಮೂವರು ಮಕ್ಕಳಾದಂತ ರಶ್ಮಿತಾ (14), ಉದಯ್ (11) ಮತ್ತು ದಕ್ಷಿತ್ (4) ಎಂಬುವರನ್ನು ಬಾವಿಗೆ ತಳ್ಳಿದ್ದಾರೆ.
ತನ್ನ ಪತ್ನಿ ಮನೆಯಲ್ಲಿ ಇಲ್ಲದಿದ್ದಾಗ ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ಕೊಂದಿದ್ದಾನೆ. ಬಳಿಕ ಪತ್ನಿ ಮನೆಗೆ ಬಂದಾಗ ಆಕೆಯನ್ನೂ ಸಹ ಬಲವಂತವಾಗಿ ಕರೆದುಕೊಂಡು ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
Advertisement. Scroll to continue reading.
ಪತ್ನಿಯನ್ನು ಕರೆದುಕೊಂಡು, ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೇಳೆಯಲ್ಲಿ ಗ್ರಾಮಸ್ಥರು ಗಮನಿಸಿದ್ದು, ಗಂಡ-ಹೆಂಡತಿಯನ್ನು ರಕ್ಷಿಸಿದ್ದಾರೆ. ದುರದೃಷ್ಟವಶಾತ್ ಬಾವಿಗೆ ತಳ್ಳಲ್ಪಟ್ಟ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇನ್ನೂ ಈ ವಿಷಯ ತಿಳಿಯುತ್ತಿದ್ದಂತ ಮಂಗಳೂರು ಉತ್ತರ ಎಸಿಪಿ ಮಹೇಶ್ ಕುಮಾರ್ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಉತ್ತರ ಎಸಿಪಿ ಮಹೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.