ನವದೆಹಲಿ : ಹಿರಿಯ ಐಪಿಎಸ್ ಅಧಿಕಾರಿ ದಿನಕರ್ ಗುಪ್ತಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಮಹಾನಿರ್ದೇಶಕರಾಗಿ ಗುರುವಾರ ನೇಮಕ ಮಾಡಲಾಗಿದೆ.
ಗುಪ್ತಾ ಅವರು 1987 ರ ಬ್ಯಾಚ್ ನ ಪಂಜಾಬ್ ಕೇಡರ್ನ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯಾಗಿದ್ದಾರೆ. ಗುಪ್ತಾ ಅವರನ್ನು ಎನ್ಐಎ ಮಹಾನಿರ್ದೇಶಕರಾಗಿ ಮಾರ್ಚ್ 31, 2024 ರವರೆಗೆ ಅಂದರೆ ಅವರ ನಿವೃತ್ತಿಯ ದಿನಾಂಕದವರೆಗೆ ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.
ಇನ್ನು, ಸ್ವಗತ್ ದಾಸ್ ಅವರನ್ನು ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ (ಆಂತರಿಕ ಭದ್ರತೆ) ಆಗಿ ನೇಮಕ ಮಾಡಲಾಗಿದೆ.
Advertisement. Scroll to continue reading.
ಸ್ವಗತ್ ದಾಸ್ ಛತ್ತೀಸ್ ಗಢ ಕೇಡರ್ನ 1987 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ಗುಪ್ತಚರ ಬ್ಯೂರೋದಲ್ಲಿ ವಿಶೇಷ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರನ್ನು ನವೆಂಬರ್ 30, 2024 ರವರೆಗೆ ನೇಮಕ ಮಾಡಲಾಗಿದೆ.
Advertisement. Scroll to continue reading.