ಉತ್ತರ ಪ್ರದೇಶ : ವರನೊಬ್ಬ ಮದುವೆ ವೇಳೆ ಕಂಠ ಪೂರ್ತಿ ಕುಡಿದ ಪರಿಣಾಮ ವಧುವಿಗೆ ಹಾರ ಹಾಕುವ ಬದಲು ಆಕೆಯ ಅತ್ತಿಗೆ ಕತ್ತಿಗೆ ಹಾರ ಹಾಕಿ ಕಪಾಳ ಮೋಕ್ಷ ಮಾಡಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದಿದೆ.
ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರ್ ಆಗಿದೆ.
ವೀಡಿಯೋದಲ್ಲಿ ವರನು ಕಂಠ ಪೂರ್ತಿ ಕುಡಿದು ತೂರಾಡುತ್ತಿತುವುದನ್ನು ಕಾಣಬಹುದು. ಅವನನ್ನು ಮತ್ತೊಬ್ಬ ಬೀಳದಂತೆ ಹಿಂಬದಿಯಿಂದ ಹಿಡಿದು ನಿಲ್ಲಿಸಿಕೊಂಡಿರುತ್ತಾನೆ. ಇಂತಹ ಸ್ಥಿತಿಯಲ್ಲೂ ಅಲ್ಲಿ ಮದುವೆ ಶಾಸ್ತ್ರ ನಡೆಯುತ್ತಿದೆ.. ಕುಡಿದ ಮತ್ತಿನಲ್ಲಿದ್ದ ವರನಿಗೆ ಇದ್ಯಾವುದರ ಅರಿವೂ ಇರುವುದಿಲ್ಲ.
Advertisement. Scroll to continue reading.
ಈ ವೇಳೆ ವಧು ವರನಿಗೆ ಹಾರ ಹಾಕಿದ್ದು, ನಂತರ ವರನಿಗೆ ಹಾರ ಹಾಕಲು ಹೇಳಲಾಗುತ್ತದೆ. ಈ ವೇಳೆ ಆತ ವಧುವಿಗೆ ಹಾರ ಹಾಕುವ ಬದಲು ಆಕೆಯ ಅತ್ತಿಗೆಗೆ ಹಾರ ಹಾಕಿದ್ದಾನೆ. ಇದರಿಂದ ಕೋಪಗೊಂಡ ಆಕೆ ವರನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಸದ್ಯ ಈ ವೀಡಿಯೋ ಸಿಕ್ಕಾ ಪಟ್ಟೆ ವೈರಲ್ ಆಗಿದೆ.
Video:
Advertisement. Scroll to continue reading.