ರೂರ್ಕಿ: ಲಿಫ್ಟ್ ಕೊಡುವ ನೆಪದಲ್ಲಿ ತಾಯಿ ಮತ್ತು ಆಕೆಯ 6 ವರ್ಷದ ಮಗಳ ಮೇಲೆ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರಾಖಂಡದ ರೂರ್ಕಿಯ ಸಿವಿಲ್ ಲೈನ್ ಕೊತ್ವಾಲಿಯಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಮಹಿಳೆಯೊಬ್ಬರು ತನ್ನ ಮಗಳೊಂದಿಗೆ ತಮ್ಮ ಊರಿಗೆ ಪ್ರಯಾಣಿಸಲು ಬಸ್ಗಾಗಿ ಕಾಯುತ್ತಿದ್ದರು.
ಈ ಸಂದರ್ಭ ಅವರಿದ್ದಲ್ಲಿಗೆ ಕಾರೊಂದು ಬಂದಿದ್ದು, ಮಹಿಳೆ ಲಿಫ್ಟ್ ಕೇಳಿದ್ದಾರೆ. ನಾವು ಅದೇ ದಾರಿಯಲ್ಲಿ ಹೋಗುತ್ತಿದ್ದೇವೆ ಎಂದ ಕಾರಿನಲ್ಲಿದ್ದವರು ತಾಯಿ-ಮಗಳನ್ನು ಹತ್ತಿಸಿಕೊಂಡಿದ್ದಾರೆ. ನಂತರ ಪ್ರಯಾಣದ ವೇಳೆ ಕಾರಿನಲ್ಲೇ ಇಬ್ಬರ ಮೇಲೂ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಬಳಿಕ ಆರೋಪಿಗಳು ಗಂಗ್ನಹಾರ್ ದಡದಲ್ಲಿ ಸಂತ್ರಸ್ತೆಯರಿಬ್ಬರನ್ನೂ ಎಸೆದು ಪರಾರಿಯಾಗಿದ್ದಾರೆ.
Advertisement. Scroll to continue reading.
ಬಳಿಕ ಮಹಿಳೆ, ಮಗಳೊಂದಿಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆಮ ಮಹಿಳೆಯ ದೂರಿನ ಮೇರೆಗೆ ಪೊಲೀಸರು ಸಾಮೂಹಿಕ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ತಾಯಿ-ಮಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ತಿಳಿದುಬಂದಿದೆ.
ಆರೋಪಿಗಳ ಪತ್ತೆಗಾಗಿ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
Advertisement. Scroll to continue reading.