ಬೆಂಗಳೂರು : ಕಬ್ಬನ್ ಪಾರ್ಕ್ ದಿನನಿತ್ಯ ಇಲ್ಲಿಗೆ ಸಾವಿರಾರು ಜನ ಮುಂಜಾನೆ ವಾಕಿಂಗ್, ಜಾಗಿಂಗ್ ಗಾಗಿ, ವಿಶ್ರಾಂತಿಗಾಗಿ ಅಗಮಿಸುತ್ತಾರೆ. ಹೆಚ್ಚಿನವರು ತಮ್ಮೊಡನೆ ಸಾಕಿದ ನಾಯಿಯನ್ನು ಕೂಡ ಕರೆದುಕೊಂಡು ಬರುತ್ತಾರೆ. ಇದೀಗ ಕಬ್ಬನ್ ಪಾರ್ಕ್ ಜುಲೈ 1 ರಿಂದ ನಾಯಿಗಳಿಗೆ ನಿಷೇಧ ಹೇರುವ ಬಗ್ಗೆ ಚಿಂತನೆ ನಡೆದಿದೆ.
ಕಬ್ಬನ್ ಪಾರ್ಕ್ಗೆ ಹೈಬ್ರೀಡ್ ನಾಯಿಗಳ ಜೊತೆ ಔಟಿಂಗ್ ರೀತಿಯಲ್ಲಿ ಜನ ಬರ್ತಾರೆ. ಆದರೆ ಈ ನಾಯಿಗಳು ಪಾರ್ಕ್ನ ಫುಟ್ ಪಾತ್, ಸ್ಥಳವನ್ನು ಗಲೀಜು ಮಾಡುತ್ತವೆ. ಕೆಲವರು ಕ್ಲೀನ್ ಮಾಡಲ್ಲ ಎಂದು ಹಲವರು ದೂರಿದ ಹಿನ್ನೆಲೆಯಲ್ಲಿ ತೋಟಗಾರಿಕಾ ಇಲಾಖೆ ಚಿಂತನೆ ನಡೆಸಿದೆ. ಇದ್ದರಿಂದ ನಾಯಿ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಾಯಿಗಳು ಸ್ವತಂತ್ರವಾಗಿ ಓಡಲು, ಆಡಲು ಸ್ಥಳವೇ ಇಲ್ಲದಂತೆ ಆಗುತ್ತದೆ. ತೋಟಗಾರಿಕೆ ಇಲಾಖೆಯು ತನ್ನ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ change.org ಜಾಲತಾಣದಲ್ಲಿ ಕಬ್ಬನ್ ಪಾರ್ಕ್ ಕ್ಯಾನೀಸ್ ಮತ್ತು ಕಬ್ಬನ್ ಡಾಗ್ ಪಾರ್ಕ್ ಸ್ವಯಂಸೇವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement. Scroll to continue reading.
ಇನ್ನು ತೋಟಗಾರಿಕೆ ಇಲಾಖೆ ಪ್ರಸ್ತಾವಕ್ಕೆ ಈಗಾಗಲೇ ಸುಮಾರು 5,500 ಮಂದಿ ತಮ್ಮ ಸಹಮತ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.