ಜಮ್ಮು-ಕಾಶ್ಮೀರ : ಜೂನ್ 30 ರಿಂದ ಅಧಿಕೃತವಾಗಿ 43 ದಿನಗಳ ಅಮರನಾಥ ಯಾತ್ರೆ ಪ್ರಾರಂಭವಾಗಲಿದ್ದು, ಆಗಸ್ಟ್ 11 ರಂದು ಕೊನೆಗೊಳ್ಳಲಿದೆ. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಯಾತ್ರೆಯನ್ನ ಮುಚ್ಚಲಾಗಿತ್ತು. ಇದೀಗ ಜೂನ್ 30ರಿಂದ ಮತ್ತೆ ಆರಂಭವಾಗಲಿದೆ.
ಅದರಂತೆ, ಅಮರನಾಥ ಯಾತ್ರಿಕರ ಮೊದಲ ಬ್ಯಾಚ್ ಜಮ್ಮುವಿನ ಭಗವತಿ ನಗರ-ಬೇಸ್ ಕ್ಯಾಂಪ್ನಿಂದ ಹೊರಡುತ್ತಿದ್ದಂತೆ, ಅಮರನಾಥ ಯಾತ್ರಾರ್ಥಿಗಳಿಗಾಗಿ ಬಾಲ್ಟಾಲ್ ಬೇಸ್ ಕ್ಯಾಂಪ್ನಲ್ಲಿ ಡೇರೆಗಳನ್ನ ಸ್ಥಾಪಿಸುವ ಕೆಲಸವು ಅಂತಿಮ ಸ್ಪರ್ಶ ಪಡೆದಿದೆ. ಅದರಂತೆ, ಕಾಶ್ಮೀರದ ಅಮರನಾಥ ಗುಹಾಂತರ ದೇವಾಲಯಕ್ಕೆ ವಾರ್ಷಿಕ ಯಾತ್ರೆ ನಾಳೆಯಿಂದ ಆರಂಭವಾಗಲಿದೆ.
Advertisement. Scroll to continue reading.