ಬೆಂಗಳೂರು : ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ‘ಕಾಶಿ ಯಾತ್ರೆ’ ಗೆ ಮಾರ್ಗಸೂಚಿಗಳನ್ನು ಅಂತಿಮಗೊಳಿಸಿ ಸರಕಾರದಿಂದ ಅಂತಿಮ ಆದೇಶ ಹೊರಡಿಸಲಾಗಿದೆ.
ರಾಜ್ಯದ 30 ಸಾವಿರ ಕಾಶಿ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ರೂಪಾಯಿಗಳಂತೆ ಸಹಾಯಧನ ನೀಡುವ ಯೋಜನೆಗೆ ಮಾರ್ಗಸೂಚಿಗಳನ್ನು ಇಂದು ಅಂತಿಮಗೊಳಿಸಲಾಗಿದೆ. ಸರಕಾರದಿಂದ ಅಧಿಕೃತವಾಗಿ ಆದೇಶ ಹೊರಡಿಸಲಾಗಿದ್ದು, ಏಪ್ರಿಲ್ 1, 2022 ಕ್ಕೆ ಪೂರ್ವಾನ್ವಯವಾಗುವಂತೆ ಈ ಆದೇಶವನ್ನು ಹೊರಡಿಸಲಾಗಿದೆ. ಸೂಕ್ತ ದಾಖಲಾತಿಗಳೊಂದಿಗೆ ಜನರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದೆ.
ಯಾತ್ರಿಕರು ಆಯಾ ವರ್ಷದ ಏಪ್ರಿಲ್ 1 ಕ್ಕೆ 18 ವರ್ಷ ಮೇಲ್ಪಟ್ಟಿರಬೇಕು. ಈ ಸಂಬಂಧ ವೋಟರ್ ಐಡಿ, ಆಧಾರ್ ಕಾರ್ಡ್, ಪಡಿತರ ಚೀಟಿ ಹೊಂದಿರಬೇಕು. ಯಾತ್ರಿಕರು ವಯಸ್ಸಿನ ಸಂಬಂಧ ಸೂಕ್ತ ದಾಖಲೆ ಹಾಜರುಪಡಿಸಬೇಕು ಎಂದು ತಿಳಿಸಲಾಗಿದೆ.
Advertisement. Scroll to continue reading.
ಇದರೊಂದಿಗೆ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಆಧಾರ್ ಲಿಂಕ್ ಆಗಿರುವ ಖಾತೆಯನ್ನು ಹೊಂದಿರಬೇಕು. ಏಪ್ರಿಲ್ 1 ರಿಂದ ಜೂನ್ 30 ರೊಳಗೆ ಕಾಶಿಗೆ ತೆರಳಿದ್ದ ಸಂಬಂಧ ದಾಖಲೆ ಇರಬೇಕು. ಧಾರ್ಮಿಕ ಧತ್ತಿ ಇಲಾಖೆ ಕಚೇರಿಗೆ ಯಾತ್ರಿಕರು ದಾಖಲೆ ಸಲ್ಲಿಸಬೇಕು. ಒಂದು ಬಾರಿ ಸಹಾಯಧನ ಪಡೆದವರು 2ನೇ ಬಾರಿಗೆ ಅವಕಾಶ ಇಲ್ಲ ಎಂದು ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.