ಪಂಜಾಬ್ : ಒಲಿಂಪಿಕ್ ಹಾಕಿ ಆಟಗಾರ ವರೀಂದರ್ ಸಿಂಗ್ ಇಂದು ಪಂಜಾಬ್ನ ಜಲಂಧರ್ನಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮೇ 16, 1947 ರಂದು ಜನಿಸಿದ ಇವರು ಒಲಿಂಪಿಯನ್ ಭಾರತೀಯ ಹಾಕಿ ಆಟಗಾರರಾಗಿದ್ದರು. 1972 ರ ಮ್ಯೂನಿಚ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದರು. 1973 ರ ಆಮ್ಸ್ಟರ್ಡ್ಯಾಮ್ನಲ್ಲಿ ನಡೆದ ವಿಶ್ವಕಪ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅಷ್ಟೇ ಅಲ್ಲದೇ, ಅವರು ಕ್ರಮವಾಗಿ 1974 ಮತ್ತು 1978 ರ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಇನ್ನೂ 1975ರ ಮಾಂಟ್ರಿಯಲ್ ಒಲಿಂಪಿಕ್ಸ್ನಲ್ಲಿಯೂ ಸ್ಪರ್ಧಿಸಿದ್ದ ಅವರು 2007 ರಲ್ಲಿ ವರೀಂದರ್ ಅವರಿಗೆ ಪ್ರತಿಷ್ಠಿತ ಮೇಜರ್ ಧ್ಯಾನ್ ಚಂದ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಯಿತು.
Advertisement. Scroll to continue reading.