ಕಲಬುರಗಿ : ತನ್ನ ಹೆಂಡತಿ ಪರ ಪುರುಷನ ಜೊತೆ ಹೋದ ಕಾರಣಕ್ಕೆ ತಂದೆಯೊಬ್ಬ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕೈಯಿಂದ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಭೋವಿ ಗಲ್ಲಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಸೋನಿ(11),ಮಯೂರಿ(10) ಕೊಲೆಗೀಡಾದ ಹೆಣ್ಣು ಮಕ್ಕಳು. ಕೃತ್ಯ ಎಸಗಿದ ತಂದೆ ಆಟೋ ಚಾಲಕ ಲಕ್ಷ್ಮಿಕಾಂತ ಎಂದು ಗುರುತಿಸಲಾಗಿದೆ.
ಲಕ್ಷ್ಮಿಕಾಂತ್ ಪತ್ನಿ ಕಳೆದ ನಾಲ್ಕು ತಿಂಗಳ ಹಿಂದೆ ತನ್ನ ನಾಲ್ಕು ಮಕ್ಕಳು ಹಾಗೂ ಪತಿಯನ್ನು ಬಿಟ್ಟು ಮತ್ತೋರ್ವನ ಜೊತೆ ಹೋಗಿದ್ದಾಳೆ ಎನ್ನಲಾಗಿದೆ. ಇದರಿಂದಾಗಿ ಆಕೆಯ ತಂದೆ ತಾಯಿಯೇ ಅವರ ನಾಲ್ಕು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.
Advertisement. Scroll to continue reading.
ಮೊನ್ನೆಯಷ್ಟೇ ಸೋನಿ ಮತ್ತು ಮಯೂರಿಯನ್ನು ಮನೆಗೆ ಕರೆದುಕೊಂಡು ಬಂದಿದ್ದ. ಭಾನುವಾರ, ಸೋಮವಾರ ಎರಡೂ ದಿನ ಮಕ್ಕಳನ್ನು ದಿನವಿಡೀ ಅಟೋದಲ್ಲಿ ಊರು ಸುತ್ತಿಸಿ ಬೇಡಿದ್ದೆಲ್ಲ ಕೊಡಿಸಿದ್ದ ಅಪ್ಪ. ಮಂಗಳವಾರ ಸಂಜೆ ಇಬ್ಬರು ಮಕ್ಕಳನ್ನು ಕತ್ತು ಹಿಚುಕಿ ಕೊಲೆ ಮಾಡಿದ್ದಾನೆ.
ನಂತರ ಶವಗಳನ್ನು ತನ್ನ ಆಟೋದ ಸೀಟ್ ಹಿಂಭಾಗದಲ್ಲಿ ಬಚ್ಚಿಟ್ಟು ಬಾಡಿಗೆಗೆ ಪ್ಯಾಸೆಂಜರ್ ಕರೆದುಕೊಂಡು ಸಹ ಓಡಾಡಿದ್ದಾನೆ ಎನ್ನಲಾಗಿದೆ. ಆಟೋದಲ್ಲಿ ದುರ್ವಾಸನೆ ಬಂದು, ಹಾಗೂ ರಕ್ತದ ಕಲೆ ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಆಟೋ ಪರಿಶೀಲನೆ ನಡೆಸಿದಾಗ ಮಕ್ಕಳ ಶವಗಳು ಪತ್ತೆಯಾಗಿವೆ. ಈ ಕುರಿತು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.