ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ರೋಟರಿ ರಾಯಲ್ ಬ್ರಹ್ಮಾವರದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹೋಟೇಲ್ ಆಶ್ರಯದಲ್ಲಿ ಜರುಗಿತು.
ನಿಕಟ ಪೂರ್ವ ಅಧ್ಯಕ್ಷ ರೋಟರಿ ರಾಜಾರಾಮ್ ಶೆಟ್ಟಿ , ಕಾರ್ಯದರ್ಶಿ ಶ್ರೀಕಾಂತ್ ಸಾಮಂತ್ ಇವರಿಂದ ನೂತನ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಮತ್ತು ಕಾರ್ಯದರ್ಶಿ ಚರಣ್ ಶೆಟ್ಟಿ ಯವರೀಗೆ ಪಧಪ್ರಧಾನ ಅಧಿಕಾರಿ ಜಿಲ್ಲಾ ಗವರ್ನರ್ ಭರತೇಶ್ ಆಧಿರಾಜ್ ಪದಪ್ರಧಾನ ನೆರವೇರಿಸಿದರು.
Advertisement. Scroll to continue reading.
ಈ ಸಂದರ್ಭ ನೂತನ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಮಾತನಾಡಿ, ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯಲ್ಲಿ ಅಧ್ಯಕ್ಷನಾದ ನಾನು ರೋಟರಿಯ ಹಿರಿಯರ ಮತ್ತು ಉನ್ನತ ರೋಟರಿಯವರ ಮಾರ್ಗದರ್ಶನಲ್ಲಿ ಮುಂದುವರಿಯುತ್ತೇನೆ. ಬ್ರಹ್ಮಾವರ ಭಾಗದಲ್ಲಿ ಅನೇಕ ಸಾಮಾಜಿಕ ಸೇವೆಯ ಗುರಿ ಹೊಂದಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ 591 ಅಂಕ ಪಡೆದು ವಿಶೇಷ ಸಾಧನೆ ಮಾಡಿದ ವಿಕಲಚೇತನೆ ವಿದ್ಯಾರ್ಥಿನಿ ಚೈತನ್ಯ ಬಾರಕೂರು ಸೇರಿದಂತೆ ಪರಿಸರದ ಶಾಲೆಯ ಅಡುಗೆ ವೃತ್ತಿಯವರೀಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡಿ ಸನ್ಮಾನಿಸಲಾಯಿತು. ಅನೇಕ ಹೊಸ ಸದಸದ್ಯರು ಸೇರ್ಪಡೆಗೊಂಡರು.
ರೋಟರಿ ಜ್ಞಾನ ವಸಂತ ಶೆಟ್ಟಿ , ಪದ್ಮನಾಭ ಕಾಂಚನ್ , ಬ್ರಾಸನ್ ಡಿ’ಸೋಜಾ, ಆನಂದ ಶೆಟ್ಟಿ, ಬಿ.ಎಂ. ಸಾಮಗ ಇನ್ನಿತರರು ಉಪಸ್ಥಿತರಿದ್ದರು.