ಪರ್ಕಳ ಕೋಡಂಗೆ ರಸ್ತೆ : ಅಸಮರ್ಪಕ ಕಾಮಗಾರಿ ಖಂಡಿಸಿ ಪಾದಯಾತ್ರೆ, ಪ್ರತಿಭಟನೆ
Published
1
ಪರ್ಕಳ : ಇಲ್ಲಿನ ಗ್ಯಾಟ್ ಸನ್ ಸರ್ಕಲ್ ಬಳಿ ಇರುವ ಬಿಎಸ್ಎನ್ಎಲ್ ಕಚೇರಿಯ ಬಳಿ ಮುಂದೆ ಸಾಗಿ ಕೋಡಂಗೆಯ ಶ್ರೀ ರಾಮ ಭಜನಾ ಮಂದಿರದತನಕ ಹಳೇ ಡಾಮಾರು ರಸ್ತೆಯನ್ನು ಕೆಡವಿ ಸುಮಾರು ಮುಕ್ಕಾಲು ಕಿಲೋಮೀಟರ್ ರಸ್ತೆಯನ್ನು ಸಂಪೂರ್ಣ ಹಾಳು ಮಾಡಿ ಎರಡು ತಿಂಗಳು ಕಳೆದರೂ ಕಾಮಗಾರಿಗೆ ಯಾವುದೇ ರೂಪರೇಷೆ ನೀಡದೇ ಹಳೇ ರಸ್ತೆಯನ್ನು ಅಲ್ಲಿ ಇಲ್ಲಿ ಆಗೆದು ಕೃತಕ ಕೆಸರುಮಯರಸ್ತೆಯನ್ನಾಗಿ ಮಾಡಿ ಸಾರ್ವಜನಿಕರು ಸಹ ತಿರುಗಾಡಲು ಆಗದಂತಹ ಪರಿಸ್ಥತಿ ಉದ್ಭವಿಸಿದೆ.
ಶಾಲಾ ಮಕ್ಕಳು ಇದೇ ಕೆಸರುಮಯ ರಸ್ತೆಯಲ್ಲಿ ತಿರುಗುವ ಪರಿಸ್ಥಿತಿ ಉಂಟಾಗಿದೆ ಮಳೆಗಾಲದಲ್ಲಿ ಈ ಕಾಮಗಾರಿ ಮಾಡಿ ತೊಂದರೆಯಾಗಿದೆ. ನಿನ್ನೆ ಹೃದಯಾಘಾತದಿಂದ ಸ್ಥಳೀಯರೊಬ್ಬರ ನಿಧನದಿಂದ ಶವ ರವಾನಿಸಲು ತೊಂದರೆ ಆಗಿದೆ.
ಸ್ಥಳೀಯರ ಬಾವಿ ರಸ್ತೆ ನೀರು ರಸ್ತೆಯ ಕೊಳಕು ನೀರು ತುಂಬಿದೆ. ನಗರಸಭೆಯ ನೀರಿನ ಸಂಪರ್ಕ ಇರುವ ಎಲ್ಲರ ಮನೆಯ ಪೈಪ್ ಲೈನ್ ನಗರ ಸಭೆ ಸಂಪರ್ಕ ಕಡಿತ ಮಾಡಿದ್ದಾರೆ. ಈ ಭಾಗದಲ್ಲಿ ಇಲ್ಲಿರುವ ಬಿಎಸ್ಎನ್ ಎಲ್ ದೂರವಾಣಿ ಸಂಪರ್ಕದ ಕಚೇರಿಯ ಹೆಚ್ಚಿನ ದೂರವಾಣಿಗಳು ರಸ್ತೆ ಅಗೆತದಿಂದ ಸ್ತಬ್ಧಗೊಂಡಿದೆ ಎಂದು ಪ್ರತಿಭಟನೆಯಲ್ಲಿ ಸ್ಥಳೀಯರು ದೂರಿದ್ದಾರೆ.
Advertisement. Scroll to continue reading.
ಸಂಬಂಧಪಟ್ಟ ಇಂಜಿನಿಯರ್ಗಳು ಫೋನನ್ನು ಆಫೀಸಿನ ಸಮಯದಲ್ಲಿ ತೆಗೆಯುವುದಿಲ್ಲ, ವಿದ್ಯುತ್ ಕಂಬಗಳು ತೆರವಾಗಿಲ್ಲ. ರಸ್ತೆ ಅಗಲೀಕರಣದ ಭಾಗದಲ್ಲಿ ಮರಗಳನ್ನು ತೆರವು ಮಾಡಲಿಲ್ಲ. ಹಳೆ ರಸ್ತೆಯನ್ನು ಸಂಪೂರ್ಣವಾಗಿ ಕೆಡವಿ ಎಲ್ಲರಿಗೂ ತೊಂದರೆ ಉಂಟು ಮಾಡಿದ್ದಾರೆ ಎಂದು ಸ್ಥಳೀಯರು ಪ್ರತಿಭಟನೆಯಲ್ಲಿ ದೂರಿದ್ದಾರೆ.
ಮೇಲ್ನೋಟಕ್ಕೆ ಇದು ಪರ್ಸೆಂಟೇಜ್ ಕಾಮಗಾರಿ ಎಂದು ಕಂಡು ಬಂದಿದೆ. ರಸ್ತೆಯ ಕೆಲಸ ಮಾಡುವವರಿಗೆ ಇದರ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಪಾದಯಾತ್ರೆ ಮುಂದೆ ನಡೆದಾಗ ಜೆಸಿಬಿಯ ಚಾಲಕರು ವಾಹನ ಸಮೇತ ಅಲ್ಲಿಂದ ಕಾಲ್ ಕಿತ್ತಿದ್ದಾರೆ. ಸರಿಯಾಗಿ ಮಾಹಿತಿ ಇಲ್ಲದೆ ಕಾಮಗಾರಿ ಏಕೆ ನಡೆಸುತ್ತೀರಿ ಎಂದು ಕೇಳಿದಾಗ, ಅವರಬಳಿ ಉತ್ತರವಿರಲಿಲ್ಲ. ಸಿಮೆಂಟು ನಾಲ್ಕು ಲಾರಿ ಬಂದಿದ್ದು ಅದು ಹಾಳಾಗುವ ಪರಿಸ್ಥಿತಿ ಉದ್ಭವಿಸಿದೆ ಹಾಗಾಗಿ ಇದೊಂದು ಪರ್ಸೆಂಟೇಜ್ ಕಾಮಗಾರಿಯೆಂದು ಮೇಲ್ನೋಟಕ್ಕೆ ತಿಳಿಯುತ್ತದೆ.ನ ಗರಸಭೆಯ ಅಧ್ಯಕ್ಷೆಯ ಕಾಮಗಾರಿ ಈ ರೀತಿ ನಡೆಯುತ್ತಿರುವುದು ಭ್ರಷ್ಟಾಚಾರಕ್ಕೆ ಕೈಗನ್ನಡಿಯಾಗಿರಬಹುದು ಎಂದು ಪ್ರತಿಭಟನೆಗಾರರು ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯರಾದ ಮೋಹನ್ ದಾಸ್ ನಾಯಕ್, ಪರ್ಕಳ ಸುಕೇಶ್ ಕುಂದರ್ ಹೆರ್ಗ, ಗಣೇಶ್ ರಾಜ್ ಸರಳೇಬೆಟ್ಟು, ಉಪೇಂದ್ರ ನಾಯ್ಕ, ದೇವೇಂದ್ರ ನಾಯ್ಕ ಭೋಜಣ್ಣ ಕರ್ಕೇರ, ಸದಾನಂದ, ಅಪ್ಪು, ರಮೇಶ್ ನಾಯ್ಕ, ಉಮೇಶ್ ನಾಯ್ಕ, ಬಾಲಕೃಷ್ಣ ಶೆಟ್ಟಿ, ತಿಮ್ಮ ಪ್ಪ ಶೆಟ್ಟಿ,ಹೆರ್ಗ,ರವಿ ಬೊಳ್ಜೆ, ಪದ್ಮಕ್ಕ , ಸಂತೋಷ್ ನಾಯ್ಕ, ಸಂತೋಷ್ ಎನ್, ಪ್ರಕಾಶ್ ನಾಯ್ಕ್ ಮೊದಲಾದವರು ಪಾದಯಾತ್ರೆಯಲ್ಲಿ ಭಾಗವಹಿಸಿದರು.