ಚಂದನವನ : ಮಗಳು ಸಮನ್ವಿಯನ್ನು ಕಳೆದುಕೊಂಡು ದುಃಖದಲ್ಲಿದ್ದ ಕಿರುತೆರೆ ನಟಿ ಅಮೃತಾ ನಾಯ್ಡು ಮನೆಯಲ್ಲಿ ಇದೀಗ ಸಂತಸ ಮೂಡಿದೆ. ನಟಿಯ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ನಟಿ ಅಮೃತಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜುಲೈ 2 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ವಿಚಾರವನ್ನು ನಟಿ ಅಮೃತಾ ಸಾಮಾಜಿಕ ಜಾಲಾತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ನಮ್ಮ ಕಷ್ಟದ ಸಮಯದಲ್ಲಿ ಜೊತೆಗಿದ್ದ ನಿಮ್ಮೆಲ್ಲರಿಗೂ ಧನ್ಯವಾದಗಳು. ಈಗ ಬದುಕಿನಲ್ಲಿ ಹೊಸ ಆರಂಭ ಆಗಿದೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆಯಿಂದಾಗಿ ರೂಪೇಶ್ ಮತ್ತು ನಾನು ಗಂಡು ಮಗುವನ್ನು ಪಡೆದಿದ್ದೇವೆ’ ಎಂದು ಅಮೃತಾ ನಾಯ್ಡು ಬರೆದುಕೊಂಡಿದ್ದಾರೆ.
ಈ ಸಂತಸದ ಸುದ್ದಿ ನೋವನ್ನು ಕಡಿಮೆ ಮಾಡಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
Advertisement. Scroll to continue reading.
ಕಿರುತೆರೆಯಲ್ಲಿ ಅಮೃತಾ ನಾಯ್ಡು ಗುರುತಿಸಿಕೊಂಡಿದ್ದರು. ಬಳಿಕ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಮಗಳು ಸಮನ್ವಿ ಜೊತೆ ಕಾಣಿಸಿಕೊಂಡು ಜನಪ್ರಿಯರಾಗಿದ್ದರು. ಅಮೃತಾ, ಸಮನ್ವಿ ದ್ವಿಚಕ್ರ ವಾಹನದಲ್ಲಿ ಜ.13ರಂದು ತೆರಳುತ್ತಿದಾಗ ಬೆಂಗಳೂರಿನ ವಾಜರಹಳ್ಳಿಯಲ್ಲಿ ಅಪಘಾತ ಸಂಭವಿಸಿತು. ಸಮನ್ವಿ ಸ್ಥಳದಲ್ಲೇ ಮೃತಪಟ್ಟಿದ್ದಳು. ಇದರಿಂದ ಸಮನ್ವಿ ಕುಟುಂಬ ಮಾತ್ರವಲ್ಲದೇ, ಇಡೀ ಕರುನಾಡೇ ಮರುಗಿತ್ತು. ಇದೀಗ ಮತ್ತೆ ಮಗುವಿನ ಆಗಮನದಿಂದ ಕುಟುಂಬದಲ್ಲಿ ಸಂತಸ ಮೂಡಿದೆ.