ಬೆಂಗಳೂರು : ನಟ ಉಳ್ಳಿಯಡ ಭುವನ್ ಪೊನ್ನಣ್ಣ ಮತ್ತು ನಟಿ ಉದ್ಧಪಂಡ ಹರ್ಷಿಕಾ ಪೂಣಚ್ಚ ಅವರ ‘ಭುವನಂ ಫೌಂಡೇಷನ್’ ಗೆ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಕೊಡಮಾಡುವ ‘ಮದರ್ ಥೆರೇಸಾ” ಪ್ರಶಸ್ತಿ ಲಭಿಸಿದೆ.
ಇಬ್ಬರು ತಾರೆಯರು ‘ಭುವನಂ ಫೌಂಡೇಷನ್’ ಮೂಲಕ ಹಲವಾರು ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಇಬ್ಬರೂ ನಿಜ ಜೀವನದಲ್ಲೂ ತಾರೆಯರಾಗಿ ಜನರಿಗೆ ಸಹಾಯ ಹಸ್ತ ಚಾಚಿದ್ದರು. ತಮ್ಮ ಫೌಂಡೇಷನ್ ಮೂಲಕ, ಕೊಡಗು ಜಿಲ್ಲೆ ಸೇರಿದಂತೆ ಹಲವೆಡೆ ಹಳ್ಳಿ ಹಳ್ಳಿಗೆ ತೆಳಿ ಸಾವಿರಾರು ಮಂದಿಗೆ ಆಹಾರ ಕಿಟ್, ತರಕಾರಿಗಳನ್ನು ನೀಡಿದ್ದರು. ಅಲ್ಲದೇ, ಜೌಷಧಿಗಳನ್ನು ಪೂರೈಸಿ ಕಷ್ಟಕ್ಕೆ ನೆರವಾಗಿದ್ದರು. ‘ಶ್ವಾಸ’ ಹೆಸರಿನ ಆಕ್ಸಿಜನ್ ಬಸ್ ಮೂಲಕ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಒತ್ತಾಡುತ್ತಿದ್ದವರಿಗೆ ಸೇವೆ ನೀಡಿದ್ದರು. ಇವರ ಸಾಮಾಜಿಕ ಕಳಕಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.
Advertisement. Scroll to continue reading.