ಬ್ರಹ್ಮಾವರ : ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನೂತನ ಶಾಖೆ ಉದ್ಘಾಟನೆ
Published
1
ಬ್ರಹ್ಮಾವರ : ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ೫ ನೇ ನೂತನ ಶಾಖೆ ಬ್ರಹ್ಮಾವರ ಸೈಂಟ್ ಅಂತೋನಿ ಪ್ರೆಸ್ ಕಟ್ಟಡದಲ್ಲಿ ಮಂಗಳವಾರ ಆರಂಭಗೊಂಡಿತು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಇದರಅಧ್ಯಕ್ಷ ಬಿ. ಹೆಚ್. ಕೃಷ್ಣ ರೆಡ್ಡಿ ಶಾಖಾ ಕಛೇರಿಯನ್ನು ಉದ್ಘಾಟಿಸಿದರು.
ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಭಾಸ್ಕರ್ ಕಾಮತ್, ಭದ್ರತಾ ಕೋಶವನ್ನು ಉದ್ಘಾಟಿಸಿದರು. ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ, ಶಾಖೆಯ ಸೆಲೂನ್ ಸಾಮಾಗ್ರಿ ಮಳಿಗೆಯನ್ನು ಉದ್ಘಾಟಿಸಿರು.
Advertisement. Scroll to continue reading.
ಬಳಿಕ ಬಂಟರ ಭವನದಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಸವಿತಾ ಸಮಾಜದ ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಪ್ರಸ್ತಾವನೆ ಮಾತನಾಡಿ, ಸವಿತಾ ಸಮಾಜ ಉತ್ತಮ ಸಂಘಟನೆಯಾದ ಕಾರಣವೇ ಇಂತಹ ಕಾರ್ಯ ಸಾಧನೆ ಸಾಧ್ಯವಾಗಿದೆ ಎಂದರು.
ಬಿ.ಹೆಚ್. ಕೃಷ್ಣ ರೆಡ್ಡಿ ಮಾತನಾಡಿ, ಉಡುಪಿ ಜಿಲ್ಲೆ ಬ್ಯಾಂಕಿಂಗ್ ಮತ್ತು ಸಹಕಾರಿ ಕ್ಷೇತ್ರ ಮಾಧರಿಯಾಗಿದೆ. ಸವಿತಾ ಸಮಾಜ ಅತೀ ಚಿಕ್ಕ ಸಮಾಜವಾದರೂ ಸಹಕಾರಿಯಾಗಿ ರಾಜ್ಯದಲ್ಲೆ ದೊಡ್ಡ ಸಾಧನೆ ಮಾಡಿದೆ. ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಮಾತ್ರ ಸಹಕಾರಿ ಕ್ಷೇತ್ರ ಬೆಳೆಯಲು ಸಾದ್ಯ ಎಂದರು.
ಕೆಲವು ಜಿಲ್ಲೆಯಲ್ಲಿ ಹಲವಾರು ಬೇರೆ ಬೇರೆ ಹೆಸರಿನಲ್ಲಿ ಸಹಕಾರಿಯ ಹೆಸರಿನಂತೆ ಹಲವಾರು ಜನರ ಹಣವನ್ನು ಕಬಳಿಸಿ ಸಹಕಾರಿ ಕ್ಷೇತ್ರಕ್ಕೆ ಕಪ್ಪು ಚುಕ್ಕೆ ತಂದರೆ ಉಡುಪಿ ಜಿಲ್ಲೆ ಸಹಕಾರಿಯ ಹೆಸರಿನಿಂದ ಜನರಲ್ಲಿ ವಿಸ್ವಾಸ ಹೆಚ್ಚಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ, ಸವಿತಾ ಸಮಾಜದಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಸೇರಿದಂತೆ ಹಲವಾರು ಸಾಧಕರನ್ನು ಸನ್ಮಾನಿಸಲಾಯಿತು.
ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಸವಿತಾ ವಿವಿದೋದ್ದೇಶ ಸಹಕಾರ ಸಂಘ ಶಿಕಾರಿಪುರ ಇದರ ಸ್ಥಾಪಕ ಅಧ್ಯಕ್ಷ ವೆಂಕಟೇಶ್ ಶಿಕಾರಿಪುರ,ದ.ಕ.ಜಿಲ್ಲಾ ಸವಿತಾ ಸಮಾಜ ಸೌಹಾರ್ದ ಸಹಕಾರ ಅಧ್ಯಕ್ಷ ವಿಶ್ವನಾಥ ಸಾಲ್ಯನ್ ಬಂಟ್ವಾಳ, ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ವಿಶ್ವನಾಥ ಭಂಡಾರಿ ನಿಂಜೂರು, ಶುಭಂ ಶೈಕ್ಷಣಿಕಗ್ರಾಮೀಣಾಭಿವೃದ್ಧಿ ಸಂಸ್ಥೆ ಶಿವಮೊಗ್ಗ ಇದರ ಅಧ್ಯಕ್ಷ ಶ್ರೀಧರ್ ಹೆಗ್ಡೆ ,ವಾರಂಬಳ್ಳಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ನಾರಾಯಣ, ಬ್ರಹ್ಮಾವರತಾಲೂಕು ಸವಿತಾ ಸಮಾಜದ ಅಧ್ಯಕ್ಷ ಶಿವರಾಮ ಭಂಡಾರಿ ಹಂದಾಡಿ, ಸಹಕಾರಿ ಕಟ್ಟಡ ಮಾಲಕ ಪವನ್, ಮುಖ್ಯ ಕಾರ್ಯ ನಿರ್ವಣಾಧಿಕಾರಿ ಮಾಲತಿ ಅಶೋಕ್ ಭಂಡಾರಿ, ಶಾಖಾ ವ್ಯವಸ್ಥಾಪಕಿ ಪ್ರಥ್ವಿ ಜಯಪ್ರಕಾಶ್ ಭಂಡಾರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಶಶಿಕಲಾ ಪ್ರಾರ್ಥಿಸಿ ಉಡುಪಿ ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು ಸ್ವಾಗತಿಸಿ, ಪರಿಚಯಿಸಿ, ಮಂಜುನಾಥ್ ಭಂಡಾರಿ ಪಡುಕೆರೆ ಕಾರ್ಯಕ್ರಮ ನಿರೂಪಿಸಿ, ರಾಜು ಭಂಡಾರಿ ವಂದಿಸಿದರು.