ಅಂತಾರಾಷ್ಟ್ರೀಯ

ಶಿಂಜೋ ಅಬೆ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ; ಒಂದು ದಿನದ ಶೋಕಾಚರಣೆ ಘೋಷಣೆ

1

ನವದೆಹಲಿ : ಜಪಾನಿನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ‘ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರಾದ ಶಿಂಜೊ ಅಬೆ ಅವರ ನಿಧನದಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ದುಃಖಿತನಾಗಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಶಿಂಜೊ ಅಬೆ ಒಬ್ಬ ಮಹಾನ್ ಜಾಗತಿಕ ಮುತ್ಸದ್ದಿ, ಅಸಾಧಾರಣ ನಾಯಕ ಮತ್ತು ಗಮನಾರ್ಹ ಆಡಳಿತಗಾರರಾಗಿದ್ದರು. ಅವರು ಜಪಾನ್ ಮತ್ತು ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

‘ಅಬೆ ಅವರೊಂದಿಗಿನ ನನ್ನ ಒಡನಾಟವು ಅನೇಕ ವರ್ಷಗಳಷ್ಟು ಹಳೆಯದಾಗಿದೆ. ನಾನು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಅವರನ್ನು ಬಲ್ಲೆ ಮತ್ತು ನಾನು ಪ್ರಧಾನಿಯಾದ ನಂತರವೂ ನಮ್ಮ ಸ್ನೇಹ ಮುಂದುವರಿಯಿತು. ಆರ್ಥಿಕತೆ ಮತ್ತು ಜಾಗತಿಕ ವ್ಯವಹಾರಗಳ ಬಗ್ಗೆ ಅವರ ತೀಕ್ಷ್ಣವಾದ ಒಳನೋಟಗಳು ಯಾವಾಗಲೂ ನನ್ನ ಮೇಲೆ ಆಳವಾದ ಪ್ರಭಾವ ಬೀರಿದವು ಎಂದು ಹೇಳಿದ್ದಾರೆ. ‘

Advertisement. Scroll to continue reading.

ಅಲ್ಲದೇ, ನಾಳೆ (ಜುಲೈ 9) ರಂದು ಪ್ರಧಾನಿ ಮೋದಿ ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದಾರೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com