ಬ್ರಹ್ಮಾವರ : ಕುದ್ರುಮನೆ ನೆರೆಯಲ್ಲಿ ಸಿಲುಕಿಕೊಂಡಿದ್ದ ಕುಟುಂಬದ ರಕ್ಷಣೆ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಕೋಟದ ಬಳಿ ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದ್ರುಮನೆ ಎಂಬಲ್ಲಿ ನೆರೆ ಪ್ರದೇಶದ ಮನೆಯೊಂದರಲ್ಲಿ ಚಿಕ್ಕ ಮಗುವಿನೊಂದಿಗೆ ಇರುವ ಕುಟುಂಬ ತೀರಾ ಅಪಾಯದಲ್ಲಿರುವುದನ್ನು ಕೋಟ ಕಂದಾಯ ನೀರೀಕ್ಷಕ ರಾಜು ರವರು ನೀಡಿದ ಮಾಹಿತಿಯಂತೆ ಬ್ರಹ್ಮಾವರ ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಸ್ಟೀವನ್ ಪ್ರಕಾಶ್ ಲುವಿಸ್ ರವರ ತಂಡ ಅತೀ ಶೀಘ್ರದಲ್ಲಿ ಬೋಟ್ ಮೂಲಕ ಹೋಗಿ ಅಪಾಯದಿಂದ ಪಾರು ಮಾಡಿದ ಘಟನೆ ಭಾನುವಾರ ನಡೆದಿದೆ.
ಮಗುವಿನ ತಾಯಿ ಅಮೃತ ಮತ್ತು ಪತಿ ಸತ್ಯ ಅವರನ್ನು ಬ್ರಹ್ಮಾವರ ಗೃಹರಕ್ಷಕದಳದ ನೆರೆ ರಕ್ಷಣಾ ತಂಡದ ಸಿಬ್ಬಂದಿಯವರಾದ ಸಂದೇಶ್, ಚಂದ್ರಶೇಖರ್, ವೆಂಕಟೇಶ್ವರ, ಕಾರ್ತಿಕ್ ರವರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸುರಕ್ಷಿತಾ ಸ್ಥಳಕ್ಕೆ ಸ್ಥಳಾಂತರಿಸಿದರು.
ಕೆಲವು ದಿನದಿಂದ ವಿದ್ಯುತ್ ಕೂಡಾ ಇಲ್ಲದ ಮನೆಗಳಿಗೆ ಮೆಸ್ಕಾಂ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗಿ ಸಂಪರ್ಕ ಕಲ್ಪಿಸಲು ಕೂಡಾ ನೆರವಾದರು.
Advertisement. Scroll to continue reading.
ಈ ವೇಳೆ ವಡ್ಡರ್ಸೆ ಗ್ರಾಮ ಲೆಕ್ಕಾಧಿಕಾರಿ ವಿಜಯ ಕುಮಾರ್ , ಪಂಚಾಯತ್ ಅಧ್ಯಕ್ಷೆ ರಮ್ಯಾ ಹಾಗೂ ಸಿಬ್ಬಂದಿಯವರು ಕೂಡಾ ಹಾಜರಿದ್ದರು