ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಸತತ ಪರಿಶ್ರಮ ದಿಂದ ಸಾಕಷ್ಟು ಹೋರಾಟಗಳಿಂದ ಕುಂದನಾಡು ರೈತ ಉತ್ಪಾದಕರ ಕಂಪೆನಿ ಪ್ರಾರಂಭ ಮಾಡಲು ಸಾಧ್ಯವಾಗಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುವುದರ ಜೊತೆಗೆ ಅವರು ಬೆಳೆಯುವ ಬೆಳೆಗಳಿಗೆ ಸರಿಯಾದ ಬೆಲೆ, ಸರಕಾರದಿಂದ ಬೆಂಬಲ ಬೆಲೆಯು ಸಿಗುತ್ತದೆ. ಹಾಗಾಗಿ ರೈತರು ಕಂಪೆನಿಯ ಸದಸ್ಯರಾಗುದರೊಂದಿಗೆ ಹೆಚ್ಚು ಹೆಚ್ಚು ಕೃಷಿಗಳ ಬಗ್ಗೆ ಮಾಹಿತಿ ಪಡೆದು ಉತ್ತಮ ಕೃಷಿಕರಾಗಬೇಕು ಎಂದು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಗುಡಿಬೆಟ್ಟು ಹೇಳಿದರು.
ಅವರು ಶನಿವಾರ ಕುಂದನಾಡು ರೈತ ಉತ್ಪಾದಕ ಕಂಪೆನಿ(ರಿ) ಹಾಗೂ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ವತಿಯಿಂದ ಹಮ್ಮಿಕೊಂಡ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿ ಶಿಬಿರ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದನಾಡು ರೈತ ಉತ್ಪಾದಕರ ಕಂಪೆನಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ವಹಿಸಿದ್ದರು.
Advertisement. Scroll to continue reading.
ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿಗಳು ಹಾಗೂ ಕೆ.ವಿ.ಕೆಯ ಮುಖ್ಯಸ್ಥ ಡಾ.ಧನಂಜಯ್ ಶೆಟ್ಟಿ , ತೋಟಗಾರಿಕೆ ತಜ್ಞ ಡಾ. ಚೈತನ್ಯ, ಕೀಟ ಶಾಸ್ತ್ರ ತಜ್ಞ ಡಾ.ಸಚಿನ್, ಕುಂದನಾಡು ರೈತ ಉತ್ಪಾದಕ ಕಂಪೆನಿ ನಿರ್ದೇಶಕಿ ಜ್ಯೋತಿ , ಕುಶಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಸ್ವಾಗತಿಸಿದರು. ಗಣೇಶ್ ಮೊಗವೀರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ರೈತರೊಂದಿಗೆ ಅಧಿಕಾರಿಗಳ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.
Advertisement. Scroll to continue reading.