ನವದೆಹಲಿ : ನೂತನ ಸಂಸತ್ ಭವನದ ಮೇಲ್ಛಾವಣಿಯ ಮೇಲೆ ನಿರ್ಮಿಸಲಾದ 6.5 ಮೀಟರ್ ಎತ್ತರದ ಕಂಚಿನ ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭವನ್ನ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಳಿಗ್ಗೆ ಅನಾವರಣಗೊಳಿಸಿದರು.
ಈ ಸಂದರ್ಭ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಈ ಕಾರ್ಯವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ ಉದ್ಯೋಗಿಗಳು ಉಪಸ್ಥಿತರಿದ್ದರು.
ಈ ಅಶೋಕ ಸ್ತಂಭವು 20 ಅಡಿಗಳಿಗಿಂತ ಹೆಚ್ಚು ಎತ್ತರವಿದೆ. ಕ್ರೇನ್ ಸಹಾಯದಿಂದ ಈ ಸ್ತಂಭವನ್ನು ಹೊಸ ಸಂಸತ್ ಕಟ್ಟಡದ ಮೇಲೆ ಸ್ಥಾಪಿಸಲಾಗಿದೆ.
Advertisement. Scroll to continue reading.
ಅಂದ್ಹಾಗೆ, ಮೋದಿ ಸರ್ಕಾರದ ಉಪಕ್ರಮದ ಮೇರೆಗೆ ದೆಹಲಿಯಲ್ಲಿ ಹೊಸ ಸಂಸತ್ ಭವನವನ್ನ ನಿರ್ಮಿಸಲಾಗುತ್ತಿದೆ. ಪ್ರಸ್ತುತ ಸಂಸತ್ ಭವನವು ಸುಮಾರು 93 ವರ್ಷಗಳಷ್ಟು ಹಳೆಯದಾಗಿದ್ದು, ಅನೇಕ ನ್ಯೂನತೆಗಳನ್ನು ಹೊಂದಿದೆ. ಹೊಸ ಸಂಸತ್ ಕಟ್ಟಡವು ಆಧುನಿಕ ಸೌಲಭ್ಯಗಳು ಮತ್ತು ಸುರಕ್ಷತಾ ಸಲಕರಣೆಗಳನ್ನು ಹೊಂದಿರಲಿದೆ. ಇಲ್ಲಿ ಏಕಕಾಲದಲ್ಲಿ 1,224 ಸದಸ್ಯರಿಗೆ ಅವಕಾಶವಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2020 ರ ಡಿಸೆಂಬರ್ 10 ರಂದು ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.