ಕೋಟ : ತಾಯಿ ಊಟ ಬಡಿಸಲಿಲ್ಲವೆಂದು ಹೇಳಿದಕ್ಕಾಗಿ ಸಿಟ್ಟುಗೊಂಡ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಡದಲ್ಲಿ ನಡೆದಿದೆ.
ನಾಗೇಂದ್ರ (14) ಆತ್ಮಹತ್ಯೆ ಮಾಡಿಕೊಂಡ ಬಾಲಕ. ನಾಗೇಂದ್ರ ಕೋಟ ವಿವೇಕ ಹೈಸ್ಕೂಲಿನಲ್ಲಿ 9 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಇಂದು ಶಾಲೆಗೆ ರಜೆ ಇದ್ದುದರಿಂದ, ಬೆಳಿಗ್ಗೆ ಕಾರ್ಕಡ ಶಾಲಾ ಮೈದಾನಲ್ಲಿ ಆಡ ಆಡಲು ಹೋಗಿದ್ದ ಎನ್ನಲಾಗಿದೆ.
ಆತನ ತಾಯಿ ಕಾರ್ಕಡದಲ್ಲಿ ಕ್ಯಾಂಟೀನ್ ನಡೆಸಿಕೊಂಡಿದ್ದು, ಆಟವಾಡಿ ಮಧ್ಯಾಹ್ನ ಊಟ ಬಡಿಸುವಂತೆ ತಾಯಿ ಬಳಿ ಕೇಳಿದ್ದಾನೆ.
Advertisement. Scroll to continue reading.
ಕ್ಯಾಂಟೀನ್ ನಲ್ಲಿ ಗಿರಾಕಿಗಳು ಇದ್ದುದರಿಂದ ನಾಗೇಂದ್ರನಿಗೆ ಮನೆಗೆ ಹೋಗಿ ಊಟ ಹಾಕಿಕೊಂಡು ಊಟ ಮಾಡು ಎಂದು ತಾಯಿ ಹೇಳಿದ್ದರು ಎನ್ನಲಾಗಿದೆ. ಹಠ ಸ್ವಭಾವದ ನಾಗೇಂದ್ರನು ಸಿಟ್ಟುಗೊಂಡು ಬಟ್ಟೆ ಹಾಕಲು ಸಿಟೌಟ್ ನಲ್ಲಿ ಕಟ್ಟಿದ ಹಗ್ಗಕ್ಕೆ ಟವೆಲ್ ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.