ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಉಡುಪಿ ವಿಧಾನಸಭಾ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ಶಾಸಕ ಕೆ. ರಘುಪತಿ ಭಟ್ ರವರ ಶಿಫಾರಸ್ಸಿನ ಮೇರೆಗೆ ಮಂಜೂರಾದ ಬ್ರೈಲ್ ಕಿಟ್, ಹೊಲಿಗೆ ಯಂತ್ರ, ಶ್ರವಣ ಸಾಧನಗಳನ್ನು ಮಂಗಳವಾರ ಬ್ರಹ್ಮಾವರ ಶಾಸಕರ ಕಚೇರಿಯಲ್ಲಿ ಜರುಗಿತು.
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಮಂಜೂರಾದ ಶ್ರವಣ ಸಾಧನವನ್ನು ಹೇರೂರು ಗ್ರಾಮದ ನಿವಾಸಿ ಧೀರಜ್ ಅವರಿಗೆ ಹಾಗೂ ವಾರಂಬಳ್ಳಿ ಗ್ರಾಮದ ನಿವಾಸಿ ಕೆ.ಎಂ ರವಿ ಅವರಿಗೆ ಮತ್ತು ೨೦೨೧-೨೨ ನೇ ಸಾಲಿನಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಮಂಜೂರಾದ ಬ್ರೈಲ್ ಕಿಟ್ ಅಂಕಿತ್ ಎಸ್. ಹಾಗೂ ರಂಜಿತ ಆರ್. ಶೆಟ್ಟಿ ಅವರಿಗೆ ನೀಡಲಾಯಿತು.
Advertisement. Scroll to continue reading.
೨೦೨೧-೨೨ ನೇ ಸಾಲಿನಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಉಡುಪಿ ಜಿಲ್ಲೆಯಲ್ಲಿ ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಮಂಜೂರಾಗಿದ್ದು ಹೇರೂರು ಗ್ರಾಮದ ಹರ್ಷಿತಾ, ಯಡ್ತಾಡಿ ಗ್ರಾಮದ ಸಾಧನ ಮತ್ತು ಶಿರೂರು ಗ್ರಾಮದ ದಿವ್ಯ ಅವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರತ್ನಾ ಉಪಸ್ಥಿತರಿದ್ದರು.