ಮುಂಬೈ : ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಮತ್ತೊಂದು ಸುದ್ದಿ ಹೊರ ಬಿದ್ದಿದೆ.
ಎನ್ ಸಿಬಿ ಯಿಂದ ಮತ್ತೊಂದು ಮಾಹಿತಿ ಹೊರಗೆ ಬಿದ್ದಿದು, ಸುಶಾಂತ್ ಸಿಂಗ್ ರಜಪೂತ್ ಅವರು ಅತಿಯಾಗಿ ಮಾದಕ ದ್ರವ್ಯ ವ್ಯಸನಿಯಾಗಲು ರಿಯಾ ಚಕ್ರವರ್ತಿ ಅವರು ಕುಮ್ಮಕ್ಕು ನೀಡಿದ್ದರು ಎಂದು ಎನ್ ಸಿ ಬಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ಒಂದು ವೇಳೆ ಈ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ತಪ್ಪಿತಸ್ಥರೆಂದು ಸಾಬೀತಾದರೆ 10 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
Advertisement. Scroll to continue reading.
ಅವರ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದ ತನಿಖೆಯಲ್ಲಿ, ಎನ್ ಸಿ ಬಿ ಈ ಪ್ರಕರಣದಲ್ಲಿ 35 ಆರೋಪಿಗಳ ವಿರುದ್ಧ ಒಟ್ಟು 38 ಆರೋಪಗಳನ್ನು ಹೊರಿಸಿದೆ.