ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ನಾಡ್ಪಾಲು ಗ್ರಾಮದ ಸೀತಾನದಿ ಬಂಡೀಮಠದಲ್ಲಿ 19 ವರ್ಷದ ಯುವತಿ ನಾಪತ್ತೆಯಾಗಿದ್ದಾಳೆ. ಚೈತ್ರಾ ನಾಪತ್ತೆಯಾಗಿರುವ ಯುವತಿ.
ಜು. 12 ರಂದು ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಆಕೆ ಮನೆಗೆ ವಾಪಾಸು ಬರದೆ ನಾಪತ್ತೆಯಾಗಿದ್ದಾಳೆ. ಆಕೆಯ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು, ಸಂಬಂಧಿಕರ ಮನೆ, ಶಾಲೆಯಲ್ಲೂ ವಿಚಾರಿಸಿದಾಗ ಆಕೆ ಅಲ್ಲಿಗೂ ಹೋಗಿಲ್ಲ ಎಂದು ತಿಳಿದು ಬಂದಿದೆ.
Advertisement. Scroll to continue reading.
ಚೈತ್ರಾ 4.4 ಉದ್ದವಿದ್ದು, ಕಪ್ಪು ಗುಂಗುರು ಕೂದಲು ಹೊಂದಿದ್ದಾರೆ. ಕಪ್ಪು ಮೈ ಬಣ್ಣ ಹೊಂದಿದ್ದು, ದುಂಡಗಿನ ಮುಖ, ಸಾಮಾನ್ಯ ಮೈಕಟ್ಟು, ಕನ್ನಡ ಭಾಷೆ ಬಲ್ಲವರಾಗಿದ್ದಾರೆ. ನಾಪತ್ತೆಯಾದ ದಿನ ಕಪ್ಪು ಬಣ್ಣದ ಚೂಡಿದಾರ ಧರಿಸಿರುತ್ತಾರೆ.
ನಾಪತ್ತೆಯಾದ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement. Scroll to continue reading.