ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಉಪ್ಪೂರಿನ ಕೆ.ಜಿ ರೋಡ್ ಸಮೀಪದ ನೀರಿನ ಹೊಂಡಕ್ಕೆ ಬಿದ್ದು ೫ ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಬುಧವಾರ ಸಂಜೆ ನಡೆದಿದೆ.
ಕುವೈಟ್ ನ ನಿವಾಸಿಗಳಾದ ನಾರ್ಮನ್ ಹಾಗೂ ಸಿಲ್ವಿಯಾ ಲೀವಿಸ್ ದಂಪತಿಗಳ ಪುತ್ರ ೫ ವರ್ಷದ ಲಾರೆನ್ ಲೂವಿಸ್ ಮೃತಪಟ್ಟ ಬಾಲಕ.
Advertisement. Scroll to continue reading.
ಸಂಜೆ ಮನೆಯಲ್ಲಿ ಬಾಲಕ ಕಾಣಿಸದ ಹಿನ್ನೆಲೆಯಲ್ಲಿ ಮನೆ ಮಂದಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಬಾಲಕನ ಪತ್ತೆಯಾಗಿರಲಿಲ್ಲ. ಗುರುವಾರ ಬೆಳಿಗ್ಗೆ ಮನೆಯ ಹಿಂಬದಿ ಇರುವ ತೋಟದ ಸಮೀಪದ ನೀರಿನ ಹೊಂಡದಲ್ಲಿ ಬಾಲಕನ ಮೃತದೇಹ ತೇಲುತ್ತಿರುವುದು ಕಂಡು ಬಂದಿದೆ.
ರಜೆ ಹಿನ್ನೆಲೆಯಲ್ಲಿ ಹುಟ್ಟೂರಿಗೆ ಬಂದಿದ್ದ ಬಾಲಕ ಜುಲೈ ೪ ರಂದು ಹುಟ್ಟು ಹಬ್ಬ ಆಚರಿಸಿಕೊಂಡಿದ್ದ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.