ನವದೆಹಲಿ: ಐಪಿಎಲ್ ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ನಟಿ ಸುಶ್ಮಿತಾ ಸೇನ್ ಅವರನ್ನು ತಮ್ಮ ಬೆಟರ್ ಹಾಫ್ ಎಂದು ಟ್ವೀಟ್ ಮೂಲಕ ಬಹಿರಂಗ ಪಡಿಸಿದ್ದಾರೆ.
ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ಅವರೊಂದಿಗಿನ ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಎರಡನೇ ಟ್ವೀಟ್ ಮಾಡಿರುವ ಲಲಿತ್ ಮೋದಿ, ಮದುವೆಯಾಗಿಲ್ಲ, ನಾವು ಪರಸ್ಪರ ಡೇಟಿಂಗ್ ಮಾಡುತ್ತಿರುವುದು ನಿಜ ಎಂದು ಬರೆದುಕೊಂಡಿದ್ದಾರೆ.
Advertisement. Scroll to continue reading.
ಲಲಿತ್ ಮೋದಿ ಅವರು 2010ರಲ್ಲಿ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆಯ ತನಿಖೆಯ ನಡುವೆಯೇ ಭಾರತವನ್ನು ತೊರೆದಿದ್ದರು. ಅಂದಿನಿಂದ ಅವರು ಲಂಡನ್ ನಲ್ಲಿದ್ದಾರೆ.
ಸುಶ್ಮಿತಾ ಸೇನ್ 1994 ರಲ್ಲಿ ಮಿಸ್ ಯೂನಿವರ್ಸ್ ಕಿರೀಟವನ್ನು ತಮ್ಮದಾಗಿಸಿಕೊಂಡರು. 1996ರ ದಸ್ತಕ್ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದ ಅವರು, ಬಿವಿ ನಂ.1, ಡೋ ನಾಟ್ ಡಿಸ್ಟರ್ಬ್, ಮೈನ್ ಹೂನ್ ನಾ, ಮೈನೆ ಪ್ಯಾರ್ ಕ್ಯುನ್ ಕಿಯಾ ಮತ್ತು ತುಮ್ಕೊ ನಾ ಭೂಲ್ ಪಾಯೆಂಗೆ ಮತ್ತು ನೋ ಪ್ರಾಬ್ಲಮ್ ಮೊದಲಾದ ಚಿತ್ರಗಳಲ್ಲಿ ಪಾತ್ರವಾಗಿದ್ದಾರೆ.
ಸುಶ್ಮಿತಾ ಸೇನ್ ಇಬ್ಬರು ಹೆಣ್ಣುಮಕ್ಕಳಾದ ಅಲಿಸಾ ಮತ್ತು ರೆನೀ ಯನ್ನು ದತ್ತು ಪಡೆದು ಸಲಹುತ್ತಿದ್ದಾರೆ. ಸೇನ್ 2000 ರಲ್ಲಿ ರೆನೀಯನ್ನು ದತ್ತು ತೆಗೆದುಕೊಂಡರೆ, ಅಲಿಸಾ 2010 ರಲ್ಲಿ ಕುಟುಂಬವನ್ನು ಸೇರಿಕೊಂಡರು. ರೆನೀ ಕಿರುಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು.
ಕಳೆದ ವರ್ಷ ಇಂಟರ್ನ್ಯಾಷನಲ್ ಎಮ್ಮಿಸ್ ನಲ್ಲಿ ಅತ್ಯುತ್ತಮ ನಾಟಕ ಸರಣಿ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಆರ್ಯ ವೆಬ್ ಸರಣಿಯಲ್ಲಿ ಸುಶ್ಮಿತಾ ಸೇನ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.
Advertisement. Scroll to continue reading.