ಕರಾವಳಿ

ಬೆಳಪುವಿನಲ್ಲಿ ಅಲ್‌ಫಲಾಹ್ ಕ್ಲಿನಿಕ್ ಉದ್ಘಾಟನೆ

0

ಕಾಪು : ಜಂಇಯ್ಯತುಲ್ ಫಲಾಹ್ ಕಾಪು ಶಾಖೆಯ ವತಿಯಿಂದ ಬೆಳಪುವಿನ ರೆಹ್ಮಾನಿಯಾ ಸರ್ಕಲ್ ಬಳಿ ನಿರ್ಮಿಸಲಾದ ಅಲ್ ಫಲಾಹ್ ಕ್ಲಿನಿಕ್‌ನ್ನು ಅಬ್ಕೋ ಗ್ರೂಪ್‌ನ ಆಡಳಿತ ನಿರ್ದೇಶಕ ಮುಹಮ್ಮದ್ ಅಸ್ಲಂ ಕಾಜಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿಯೋರ್ವನಿಗೂ ಶಿಕ್ಷಣ ಹಾಗೂ ಆರೋಗ್ಯ ಅತೀ ಮುಖ್ಯ. ಈ ನಿಟ್ಟಿನಲ್ಲಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಮೂಲಕ ಆರೋಗ್ಯವಂತರನ್ನಾಗಿಸುವ ಜವಾಬ್ದಾರಿ ಪ್ರತಿಯೋರ್ವರಿಗೂ ಇದೆ. ಈ ಬಗ್ಗೆ ಹೆತ್ತವರು ಚಿಂತನೆ ನಡೆಸಬೇಕು ಎಂದು ಕರೆ ನೀಡಿದರು.
ದಕ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಬೆಳೆಯುತ್ತಿರುವ ಬೆಳಪು ಗ್ರಾಮಕ್ಕೆ ಆಸ್ಪತ್ರೆಯೊಂದು ಅಗತ್ಯತೆ ಇತ್ತು. ಈ ನಿಟ್ಟಿನಲ್ಲಿ ಜಮೀಯತುಲ್ ಫಲಾಹ್ ಮೂಲಕ ಅರೋಗ್ಯ ಕೇಂದ್ರ ತೆರೆದಿರುವುದು ಇಲ್ಲಿನ ಜನರ ಭಾಗ್ಯ. ಇದರ ಸದುಪಯೋಗವನ್ನು ಇಲ್ಲಿನ ಜನತೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.


ಉಡುಪಿಯ ಲಂಬೊರ್ಡ್ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಮಾತನಾಡಿ, ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಜೀವನವನ್ನು ನಡೆಸುವುದರೊಂದಿಗೆ ಇನ್ನೊಬ್ಬರ ಸೇವೆಯಲ್ಲೂ ತೊಡಗಿಸಿಕೊಳ್ಳುವುದು ಒಂದು ಉತ್ತಮ ಕೆಲಸವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಮೀಯತುಲ್ ಫಲಾಹ್ ದಕ, ಉಡುಪಿ ಜಿಲ್ಲಾ ಅಧ್ಯಕ್ಷ ಶಭಿ ಅಹಮದ್ ಕಾಜಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಸಾಮಾಜಿಕ ಕ್ಷೇತ್ರಗಳಲ್ಲಿ ಜಮೀಯತುಲ್ ಫಲಾಹ್ ಸೇವೆ ನೀಡುವುದು ಧ್ಯೇಯೆಯಾಗಿದೆ. ಈ ನಿಟ್ಟಿನಲ್ಲಿ ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಬೆಳಪುವಿನಲ್ಲಿ ಆರೋಗ್ಯ ಕೇಂದ್ರ ತೆರೆದಿರುವುದಾಗಿ. ಬೆಳಪು ಗ್ರಾಪಂ ಮನವಿಯ ಮೇರೆಗೆ ಆಂಬುಲೆನ್ಸ್ ನೀಡುವ ಬಗ್ಗೆ ಶೀಘ್ರದಲ್ಲಿಯೇ ನೀಡುವ ಭರವಸೆಯನ್ನು ನೀಡಿದರು.


ಅನಿವಾಸಿ ಉದ್ಯಮಿ ಅಬ್ದುಲ್ ಜಲೀಲ್ ಸಾಹೇಬ್ ಉದ್ಯಾವರ, ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಭಟ್, ಡಾ. ಗಣೇಶ್ ಕಾಮತ್, ಸಿರಾಜುದ್ದೀನ್ ಕಾಜಿ, ಶಾಹಿಜಾನ್ ಕಾಜಿ, ಜೆಎಫ್‌ಸಿಸಿ ದಕ, ಉಡುಪಿ ಪ್ರಧಾನ ಕಾರ್ಯದರ್ಶಿ ಫಝಲುರ್ರಹ್ಮನ್, ಕೋಶಾಧಿಕಾರಿ ಎಫ್‌ಎಮ್ ಬಶೀರ್, ಮಾಜಿ ಅಧ್ಯಕ್ಷ ಇಬ್ರಾಹಿಮ್ ಕೋಟ, ಕಾಸಿಂ ಬಾರ್ಕೂರು, ಮಾಜಿ ಅಧ್ಯಕ್ಷ ಅಶ್ಪಾಕ್ ಅಹಮದ್, ಆಲಿ ಫರ್ವೇಝ್, ಎನ್‌ಆರ್‌ಸಿಸಿ ಸದಸ್ಯ, ಅಬ್ದುಲ್ ರಶೀದ್, ಮೊಯಿದಿನ್, ರವೂಫ್ ಮೂಡಬಿದ್ರಿ, ಮುಹಮ್ಮದ್ ರಫೀಕ್ ಜಿದ್ದಾ, ಮುಹಮ್ಮದ್ ಸಲೀಂ ಜುಬೈಲ್, ಶಮೀರ್ ಕಾಜಿ, ಶಾಬಿರ್ ಆಲಿ, ಮುಸ್ತಾಕ್ ಅಹಮದ್, ನಝೀರ್, ಸಾಧಿಕ್ ದೀನಾರ್, ನಜೀರ್, ಬಶೀರ್ ಫಕೀರ್ಣಕಟ್ಟೆ, ಸಮಾಜ ಸೇವಾ ಮುಂದಾಳು ಝಹೀರ್ ಬೆಳಪು ಉಪಸ್ಥಿತರಿದ್ದರು.
ಬೆಳಪು ಮಿನಾರಾ ಮಸ್ಜಿದ್‌ನ ಮೌಲಾನಾ ಅಬು ಹಸನ್ ಖಿರಾತ್ ಪಠಿಸಿದರು.


ಜಮೀಯತುಲ್ ಫಲಾಹ್ ಕಾಪು ಯುನಿಟ್ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಸ್ವಾಗತಿಸಿದರು.
ತಂದೆತಾಯಿಯ ನೆನಪಿಗಾಗಿ: ೧೦೦೦ ಚದರ ಅಡಿಯಲ್ಲಿ ಕಟ್ಟಡದಲ್ಲಿ ಡಾ. ಗಣೇಶ್ ಕಾಮತ್ ಅವರು ಜನರ ಸೇವೆಗೆ ಲಭ್ಯವಿದ್ದಾರೆ. ಈ ಕಟ್ಟಡವನ್ನು ಇನ್ನೂ ವಿಸ್ತರಿಸಲು ೧೧೦೦ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಉದ್ಯಮಿ ಅಸ್ಲಂ ಕಾಜಿ ಅವರ ತಂದೆ ತಾಯಿಯ ನೆನಪಿಗಾಗಿ ಕಟ್ಟಡವನ್ನು ನಿರ್ಮಿಸಿದ್ದಾರೆ. ಈ ಕೇಂದ್ರದಲ್ಲಿ ಜನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com