ದಿಕ್ಸೂಚಿ ನ್ಯೂಸ್ ವರದಿ ಇಂಪ್ಯಾಕ್ಟ್ : ನೀಲಾವರ ಕಿಂಡಿ ಆಣೆಕಟ್ಟಿನಲ್ಲಿ ಸಿಲುಕಿದ್ದ ಭಾರೀ ಗಾತ್ರದ ಮರದ ದಿಮ್ಮಿಗಳ ತೆರವು
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ಬಳಿಯ ಸೀತಾನದಿಗೆ ನೀಲಾವರದಲ್ಲಿ ಮಾಡಲಾದ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿಕೊಂಡ ಭಾರೀ ಗಾತ್ರದ ಮರದ ದಿಮ್ಮಿಗಳಿಂದ ಕೃತಕ ಪ್ರವಾಹ ಉಂಟಾದ ಕುರಿತು ಮತ್ತು ಸಂಪರ್ಕ ಕಡಿತಗೊಂಡ ಕುರಿತು ಗುರುವಾರ ದಿಕ್ಸೂಚಿಯಲ್ಲಿ ಹಾನಿಯ ಕುರಿತು ವಿಸ್ಕೃತ ವರದಿ ಬಿತ್ತರಿಸಿತ್ತು.
ವರದಿಯ ಪರಿಣಾಮ ನಿನ್ನೆ ದಿನವೇ ಎಲ್ಲಾ ಅಧಿಕಾರಿಗಳು ಭೇಟಿ ನೀಡಿ ಇಂದು ಶುಕ್ರವಾರ ತೆರವು ಕಾರ್ಯ ಮಾಡುತ್ತಿದೆ. ಶುಕ್ರವಾರ ಬೆಳಿಗ್ಗೆ ೧೦ ಮಂದಿ ಮಾನವ ಶಕ್ತಿ ಮತ್ತು ಕಟಾವು ಯಂತ್ರದಿಂದ ತೆರವು ಕಾರ್ಯ ನಡೆಯುತ್ತಿದೆ. ಸಣ್ಣ ನೀರಾವರಿ ಇಲಾಖೆ ಇಂತಹ ಆಕಸ್ಮಿಕ ಅವಾಂತರಕ್ಕೆ ಹಣ ಬಿಡುಗಡೆ ಮಾಡುವುದು ತಡವಾದರೂ ಕೂಡಾ ಇದರ ನಿರ್ವಹಣೆ ಮಾಡುವ ಗುತ್ತಿಗೆದಾರರೇ ತುರ್ತು ಕೆಲಸಕ್ಕೆ ಸ್ಪಂದಿಸಿದ್ದಾರೆ.
ಸಣ್ಣ ನೀರಾವರಿ ಇಲಾಖೆಯಿಂದ ೨-೫ ಮೀಟರಿನಂತೆ ೫೨ ಕಿಂಡಿಗಳ ೬೦೦ ಮೀಟರ ಅಗಲದ ಬೃಹತ್ ಕಿಂಡಿ ಅಣೆಕಟ್ಟು ನದಿಗೆ ಮಾಡುವ ಕರಾವಳಿ ಜಿಲ್ಲೆಯ ಪ್ರಾಯೋಗಿಕ ಕಿಂಡಿ ಅಣೆಕಟ್ಟು ಇದಾಗಿತ್ತು. ಇದರಿಂದ ಜನವರಿಯಿಂದ ಮೇ ತಿಂಗಳ ತನಕ ೫ ತಿಂಗಳು ನದಿ ತೀರದ ಅನೇಕ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚುತ್ತಿತ್ತು . ಮರದ ಹಲಗೆ ಅಲ್ಲದೆ ಪೈಬರ್ ಡೋರ್ ವ್ಯವಸ್ಥೆ ಮಾಡಿದಲ್ಲಿ ಮತ್ತು ಅಗಲೀಕರಣ ಮಾಡಿದಲ್ಲಿ ರೈತರಿಗೆ ಹೆಚ್ಚು ಉಪಯುಕ್ತವಾಗುತ್ತಿತ್ತು ಎನ್ನುವುದು ರೈತರ ಬೇಡಿಕೆ. ದಿಕ್ಸೂಚಿಯ ಸಕಾಲಿಕ ವರದಿಯ ಪರಿಣಾಮದಿಂದ ಈ ಭಾಗದ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.