ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ವಾರಂಬಳ್ಳಿ ಗ್ರಾಮಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ೫ ನೇ ವಾರ್ಡ್ ನ ಸಾಮಾನ್ಯ ಮಹಿಳೆ ಸ್ಥಾನದಿಂದ ನಾಗವೇಣಿ ಅಧ್ಯಕ್ಷೆಯಾಗಿ ಮತ್ತು ಅದೇ ವಾರ್ಡ್ ನ ಹಿಂದುಳಿದ ವರ್ಗ ಏ ಇದರಿಂದ ದೇವಾನಂದ ನಾಯಕ್ ಉಪಾಧ್ಯಕ್ಷರಾಗಿ ಮುಂದಿನ ಅವಧಿಗೆ ಇಂದು ಆಯ್ಕೆಗೊಂಡರು.
೯ ಮಹಿಳೆ ಮತ್ತು ೯ ಪುರುಷರ ಒಟ್ಟು ೧೮ ಸದಸ್ಯರಿರುವ ವಾರಂಬಳ್ಳಿ ಗ್ರಾಮ ಪಂಚಾಯತಿ ಪ್ರಗತಿಯ ದೃಷ್ಟಿಯಲ್ಲಿ ಜನರ ಬೇಡಿಕೆಗೆ ಮುಂದಿನ ದಿನದಲ್ಲಿ ಪಟ್ಟಣ ಪಂಚಾಯತಿ ಆಗುವ ಸಾದ್ಯತೆ ಇದ್ದು ಗ್ರಾಮ ಪಂಚಾಯತಿಯ ಕೊನೆಯ ಆಡಳಿತವಾಗಲಿದೆ.
ತಾಲೂಕು ಪಂಚಾಯತಿ ಕಾರ್ಯನಿರ್ವಣಾಧಿಕಾರಿ ಇಬ್ರಾಹಿಂಪುರ , ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿ ಫರ್ಜಾನಾ , ಕಾರ್ಯದರ್ಶಿ ಶೇಖರ ನಾಯ್ಕ್ ,ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಿ. ಭುಜಂಗ ಶೆಟ್ಟಿ . ಮಾಜಿ ತಾಲೂಕು ಪಂಚಾಯತಿ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ , ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ .ಎಸ್ ನಾರಾಯಣ , ನಿತ್ಯಾನಂದ ಬಿ.ಆರ್ ಇನ್ನಿತರು ಉಪಸ್ಥಿತರಿದ್ದರು.
Advertisement. Scroll to continue reading.