ಬ್ರಹ್ಮಾವರ: ಬ್ಯಾಂಕ್ ಆಫ್ ಬರೋಡ ಇದರ ೧೧೫ ನೇ ವರ್ಷದ ಆಚರಣೆ ಬ್ರಹ್ಮಾವರ ಶಾಖೆಯಲ್ಲಿ ಬುಧವಾರ ಜರುಗಿತು . ಬ್ಯಾಂಕಿನ ಸ್ಥಾಪಕರಾದ ಸಯ್ಯಾಜಿರಾವ್ ಗಾಯಕವಾಡ್ ಮತ್ತು ಇದೀಗ ವೀಲಿನಗೊಂಡ ವಿಜಯ ಬ್ಯಾಂಕ್ ಸ್ಥಾಪಕರಾದ ಮೂಲ್ಕಿ ಸುಂದರ ರಾಮ್ ಶೆಟ್ಟಿ , ಅತ್ತಾವರ ಬಾಲಕೃಷ್ಣ ಶೆಟ್ಟಿಯವರ ಭಾವ ಚಿತ್ರಕ್ಕೆ ಬ್ಯಾಂಕ್ನ ಶಾಖಾ ಮುಖ್ಯ ಪ್ರಭಂದಕ ಭರತ್ ಎಚ್. ವಿ . ಮತ್ತು ಎಲ್ಲಾ ಸಿಬ್ಬಂದಿಗಳು ಪುಷ್ಪ ನಮನಸಲ್ಲಿಸಿದರು. ಶೈಕ್ಷಣಿಕವಾಗಿ ಹಲವಾರು ಸಾಮಾಜಿಕ ಜಾಗೃತಿ ಚಟುವಟಿಕೆಯಲ್ಲಿ ಸಾಧನೆ ಮಾಡಿದ ಕುಂಜಾಲು ವಿಶ್ವಕೀರ್ತಿ ಹಿರೀಯಪ್ರಾಥಮಿಕ ಶಾಲೆಗೆ ರೂ ೩೦,೦೦೦ ದೇಣಿಗೆಯನ್ನು ಶಾಲಾ ಮುಖ್ಯಸ್ಥರಿಗೆ ನೀಡಲಾಯಿತು. ಬ್ಯಾಂಕ ನ ಗ್ರಾಹಕರೀಗೆ ಮತ್ತು ವಿಶ್ವಕೀರ್ತಿ ಹಿರೀಯಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು .