ಕರಾವಳಿ

ಉಪ್ಪುಂದ : ಕವರ್ ಸಹಿತ ಚಾಕಲೇಟ್ ನುಂಗಿದ ಎರಡನೇ ತರಗತಿ ವಿದ್ಯಾರ್ಥಿನಿ; ಸಾವು

3

ಉಪ್ಪುಂದ : ಕವರ್‌ ಸಹಿತ ಚಾಕಲೇಟ್‌  ನುಂಗಿ ಎರಡನೇ ತರಗತಿ ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿರುವ ಘಟನೆ ಬಳವಾಡಿಯಲ್ಲಿ ಬುಧವಾರ ನಡೆದಿದೆ.

ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬವಳಾಡಿ ಗ್ರಾಮದ ಸಮನ್ವಿ ಮೃತ ಬಾಲಕಿ.

ಸಮನ್ವಿ ಖಾಸಗಿ ಆಂಗ್ಲಮಾಧ್ಯಮದಲ್ಲಿ 2ನೇ ತರಗತಿ ಓದುತ್ತಿದ್ದು, ಮುಂಜಾನೆ ಶಾಲೆಗೆ ಹೊರಡುತ್ತಿದ್ದ ವೇಳೆ ಹಠ ಹಿಡಿದಿದ್ದಳು ಎಂಬ ಕಾರಣಕ್ಕೆ ಮಗಳನ್ನು ಸಮಾಧಾನಪಡಿಸಲು ಆಕೆಯ ತಾಯಿ ಚಾಕಲೇಟ್‌ ನೀಡಿದ್ದಾರೆ.

Advertisement. Scroll to continue reading.

ಈ ವೇಳೆ ಶಾಲಾ ವಾಹನ ಬಂದಿದ್ದು, ಸಮನ್ವಿ ಕವರ್‌ ಸಹಿತ ಚಾಕಲೇಟ್‌ ನುಂಗಿದ್ದಾಳೆ. ಪರಿಣಾಮ ಚಾಕಲೇಟ್  ಗಂಟಲಲ್ಲಿ ಸಿಲುಕಿಕೊಂಡು, ಆಕೆ ಅಸ್ವಸ್ಥಗೊಂಡಿದ್ದಾಳೆ.

ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗಾಗಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದರು ಎಂದು ತಿಳಿದುಬಂದಿದೆ.

ವರದಿ : ದಿನೇಶ್ ರಾಯಪ್ಪನಮಠ

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com