ಬೆಳ್ತಂಗಡಿ : ‘ವೀರರು ಅಮರರು’ ಯೋಧರ ವಿಶೇಷ ಕಾರ್ಯಕ್ರಮದ ಬಿಡುಗಡೆ ಸಮಾರಂಭ
Published
0
ಬೆಳ್ತಂಗಡಿ: ಪ್ರೀವಂತ್ ಕ್ರಿಯೇಟಿವ್ ಸೆಂಟರ್ ನಿರ್ಮಾಣದ ‘ವೀರರು ಅಮರರು’ ಯೋಧರ ವಿಶೇಷ ಕಾರ್ಯಕ್ರಮದ ಬಿಡುಗಡೆ ಸಮಾರಂಭ ಸೋಮವಾರ ಬೆಳ್ತಂಗಡಿ ತಾಲೂಕಿನ ನಡ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ವಹಿಸಿದ್ದರು. ವಿಶೇಷ ಅತಿಥಿಯಾಗಿ ಭಾರತೀಯ ಸೇನೆಯ ನಿವೃತ್ತ ಸೈನಿಕ, ಕಾರ್ಗಿಲ್ ಯುದ್ದದಲ್ಲಿ ಯೋಧರಾಗಿ ಹೋರಾಡಿದ್ದ ರೋಹಿತಾಶ್ವ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕ ಶಿವಪುತ್ರ ಸುಣಗಾರ, ಎಸ್‌ಡಿಎಂಸಿ ಉಪಾಧ್ಯಕ್ಷ ಸುಧಾಕರ್, ಪ್ರೀವಂತ ಕ್ರಿಯೇಟಿವ್ ಸೆಂಟರ್‌ನ ಮುಖ್ಯಸ್ಥ, ಪ್ರೀವಂತದ ಅ್ಯಂಕರಿಂಗ್ ತರಗತಿಯ ಗುರು ಕುಮಾರೇಶ್ ಕಣಿಯೂರು, ಪ್ರೀವಂತದ ಬ್ರಾಂಡ್ ಪ್ರೊಮೋಟಿಂಗ್ ಕಿಡ್ ಮಾಡೆಲ್ ಪೋಷಕಿ ನಿಶ್ಮಿತಾ ಉಪಸ್ಥಿತರಿದ್ದರು.