ಬ್ರಹ್ಮಾವರ : ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಹಾಗೂ ದ್ವಿಚಕ್ರ ವಾಹನದ ಮೆಕ್ಯಾನಿಕ್ಗಳಿಗೆ ಹೊಸ ತಂತ್ರಜ್ಞಾನದ ಬಿ ಎಸ್ 6 ದ್ವಿ ಚಕ್ರ ವಾಹನದ ತರಬೇತಿ ಸಂಘದ ಕಟ್ಟಡದಲ್ಲಿ ಮಂಗಳವಾರ ಜರುಗಿತು.
ಕ್ಯಾಸ್ಟರೋಯಿಲ್ ಸಂಸ್ಥೆಯ ವಿಭಾಗೀಯ ಮುಖ್ಯಸ್ಥ ರಾಜ್ ತರಬೇತಿಯ ಕುರಿತು ಮಾತನಾಡಿ, ವಾಹನದ ಕಂಪೆನಿಗಳು ಹೊಸ ತಂತ್ರಜ್ಞಾನಗಳನ್ನು ಅಳವಡಿಸುವಾಗ ನೀವುಗಳು ಕೂಡಾ ಅದರ ಕುರಿತು ತಿಳಿದುಕೊಂಡಾಗ ಮುಂದಿನ ದಿನದಲ್ಲಿ ನಿಮ್ಮ ವೃತ್ತಿಗೆ ಹೆಚ್ಚು ಗೌರವ ಮತ್ತು ಆಧಾಯ ಕಂಡುಕೊಳ್ಳಲು ಸಾದ್ಯ ಎಂದರು.
ಸಂಘದ ಗೌರವಾಧ್ಯಕ್ಷ ಗಿಲ್ಬರ್ಟ ರಾಡ್ರಿಗಸ್ , ಸ್ಥಾಪಕ ಅಧ್ಯಕ್ಷ ಬಂಡೀಮಠ ವಾಸುದೇವ ಆಚಾರ್ಯ , ಅಧ್ಯಕ್ಷ ನಾರಾಯಣ ಪೂಜಾರಿ , ಕಾರ್ಯದರ್ಶಿ ಪ್ರವೀಣ ಚಂದ್ರ ನಾಯಕ್ , ಜೊತೆ ಕಾರ್ಯದರ್ಶಿ ಗಣೇಶ್ ,ಗಂಗಾಧರ ಆಚಾರ್ಯ ಬಂಡೀಮಠ ಇನ್ನಿತರು ಉಪಸ್ಥಿತರಿದ್ದರು, ಕಂಪೆನಿಯ ಪ್ರಶಾಂತ್ , ಸಚಿನ್ , ಮಲ್ಲಿಕಾರ್ಜುನ್ ತರಬೇತುದಾರರಾಗಿದ್ದರು. ಪರಿಸರದ ೩೦ ಕ್ಕೂ ಹೆಚ್ಚು ಸದಸ್ಯರು ತರಬೇತಿಯಲ್ಲಿದ್ದರು.