ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಪ್ರವೀಣ್ ನೆಟ್ಟಾರು ಅವರ ಕೊಲೆ ಹಾಗೂ ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿದ ಲಾಠಿ ಚಾರ್ಜ್ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಉಡುಪಿ ಗ್ರಾಮಾಂತರ ಬಿಜೆಪಿ ಕಾರ್ಯದರ್ಶಿ ಸುನಿಲ್ ಶೆಟ್ಟಿ ಉಪ್ಪೂರು ಅವರ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದಾರೆ.
ಹಲವಾರು ವರ್ಷದಿಂದ ಹಿಂದೂ ಸಂಘಟನೆಯಲ್ಲಿ ತೊಡಗಿಸಿಕೊಂಡ ಅವರು ಈ ಸಂದರ್ಭ ಮಾತನಾಡಿ, ಶಿವಮೊಗ್ಗದ ಹರ್ಷ ಹಾಗೂ ಪ್ರವೀಣ್ರಂತೆ ನಾನಾ ಭಾಗದಲ್ಲಿ ಅನೇಕ ಹಿಂದೂ ಕಾರ್ಯಕರ್ತರು ಕೊಲೆಯಾಗಿ ಬಿದ್ದರೂ, ಹಿಂದೂ ಪರ ಪಕ್ಷ ಎಂದು ಆಡಳಿತಕ್ಕೆ ಬಂದ ಸರಕಾರ ದೇಶದ್ರೋಹಿ ಸಂಘಟನೆಯನ್ನು ಮಟ್ಟ ಹಾಕದೆ ಮೌನವಾಗಿದೆ. ಆ ಕುರಿತು ನ್ಯಾಯ ಸಿಗುವವರೆಗೂ ಹೋರಾಟವನ್ನು ಹಿಂದೂ ಸಂಘಟನೆಯೊಂದಿಗೆ ಮುಂದುವರಿಸುತ್ತೇನೆ ಎಂದು ತಿಳಿಸಿದ್ದಾರೆ.
Advertisement. Scroll to continue reading.