ಕರಾವಳಿ

ಬ್ರಹ್ಮಾವರ : ಅಪರಾಧ ಪತ್ತೆ ಹಚ್ಚಲು ನೆರವಾಗುವ ಸಿಸಿ ಕ್ಯಾಮರಾಗಳು; ಸರ್ಕಾರದ ಆದೇಶಗಳನ್ನು ಪಾಲನೆ ಮಾಡದ ಸಾರ್ವಜನಿಕರು

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಕೊಲೆ ಸುಲಿಗೆ ದರೋಡೆ ಅಪಪಾಧ ನಡೆದ ಸಮಯದಲ್ಲಿ ಪೋಲೀಸ್ ಇಲಾಖೆ ಆರೋಪಿಗಳನ್ನು ಪತ್ತೆ ಹಚ್ಚಲು ಹೊಸ ತಂತ್ರಜ್ಞಾನ ಹೆಚ್ಚಿಸಬೇಕು ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಸುಳಿವೇ ಸಿಗದಂತೆ ಅಪರಾಧ ಮಾಡುವ ಚಾಣಾಕ್ಷ ಕಳ್ಳರನ್ನು ಕೊಲೆಗಾರರನ್ನು ಬಂಧಿಸಲು ಮಾಡುವ ಪರಿಸರದ ಹಳೆ ಆರೋಪಿಗಳ ತನಿಖೆ, ಶ್ವಾನ ದಳ, ಬೆರಳಚ್ಚು ಮೊಬೇಲ್ ಬಳಸಿದಲ್ಲಿ ಟವರ್ ಲೋಕೇಶನ್ ಎಲ್ಲಕ್ಕಿಂತ ಆಯಕಟ್ಟಿನ ಜಾಗದಲ್ಲಿರುವ ಸಿಸಿ ಕ್ಯಾಮರಾ ಫೂಟೇಜ್ ಮತ್ತು ಸರಕಾರ ಹೊಸ ವಾಹನಗಳು ನೀಡಿದಲ್ಲಿ ಪೊಲೀಸ್ ಇಲಾಖೆಗೆ ಮಹತ್ತರ ಉಪಕಾರವಾಗುತ್ತದೆ.

ಪೊಲೀಸ್ ಇಲಾಖೆ ಕೂಡಾ ಪ್ರತಿಭಟನೆ, ಗುಂಪು ಘರ್ಷಣೆ ಸಮಯದಲ್ಲಿ ಒಂದೆಡೆಯಲ್ಲಿ ವೀಡಿಯೋ ದಾಖಲೆ ಮಾಡಿಕೊಂಡಿರುತ್ತದೆ.
ಕರಾವಳಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನದ ಹಿಂದೆ ನಡೆದ ಹತ್ಯೆಯನ್ನು ಪತ್ತೆ ಹಚ್ಚಲು ಸ್ಥಳಿಯ ಹಲವಾರು ಭಾಗದ ಸಿಸಿ ಕ್ಯಾಮರಾ ಫೂಟೇಜ್ ಸಹಕಾರಿಯಾಗದೆ,
ಬ್ರಹ್ಮಾವರ ಪೊಲೀಸ್ ವೃತ್ತ ವಿಭಾಗದಲ್ಲಿ ನಡೆದ ವಿಶಾಲಾ ಗಾಣಿಗ ಕೊಲೆ ಸೇರಿದಂತೆ ಅನೇಕ ಕೊಲೆಗಾರರ ಚಾಡನ್ನು ಹಿಡಿಯಲು ನೆರವಾಗಿದ್ದು ಮತ್ತು ಲಾಕ್ ಡೌನ್ ಸಮಯದಲ್ಲಿ ಬಸ್ ಸಂಚಾರ ಇಲ್ಲದ ಸಮಯದಲ್ಲಿ ಒಂಟಿ ಮಹಿಳೆಯನ್ನು ಅತ್ಯಾಚಾರಕ್ಕೆ ಪ್ರಯತ್ನ ಮಾಡಿದ ಘಟನೆ ಇದೆಲ್ಲವನ್ನು ಪತ್ತೆ ಹಚ್ಚಲು ಈ ಭಾಗದ ಆಯಕಟ್ಟಿನ ಜಾಗದಲ್ಲಿರುವ ಪವರ್ ಫುಲ್ ಕ್ಯಾಮರಾ ಸಹಕಾರಿಯಾಗಿದೆ.


ಬಾರಕೂರು ನಗರ ಮದ್ಯಭಾಗದಲ್ಲಿ ಪೋಲೀಸ್ ಇಲಾಖೆಯ ವಿನಂತಿಯ ಮೇರೆಗೆ ೧೦ ವರ್ಷದ ಹಿಂದೆ ಸಾರ್ವಜನಕರೇ ಇಲ್ಲಿನ ಸಮಾನ ಮನಸ್ಕರ ೫ ಮಂದಿಯ ತಂಡ ಸಿಸಿ ಕ್ಯಾಮರಾವನ್ನು ಅಳವಡಿಸಿದ್ದಾರೆ.


ಮಂದಾರ್ತಿ ತಿರುವಿನಲ್ಲಿ ಓರ್ವ ಉದ್ಯಮಿ ಕೂಡಾ ತಮ್ಮ ಮನೆಗೆ ಕ್ಯಾಮರಾ ಅಳವಡಿಕೊಂಡಂತೆ ರಸ್ತೆಯ ಚಿತ್ರಣ ಬರುವಂತೆ ಕೂಡಾ ೨ ಪವರ್ ಫುಲ್ ಕ್ಯಾಮಾರಾ ಅಳವಡಿದ್ದಾರೆ.

Advertisement. Scroll to continue reading.


ಇನ್ನು ಕೆಲವು ನಗರ ಭಾಗದಲ್ಲಿ ಬ್ಯಾಂಕ್ ಬಂಗಾರದ ಅಂಗಡಿ ಇನ್ನು ಕೆಲವು ವಾಣಿಜ್ಯಕೇಂದ್ರದಲ್ಲಿರುವ ಸಿಸಿ ಕ್ಯಾಮರಾಗಳು ಇದ್ದರೂ ಹಳೆ ಮಾದರಿಯಾಗಿದ್ದು ಚಿತ್ರಣ ಸರಿಯಾಗಿ ಮೂಡಿ ಬರುವುದಿಲ್ಲ. ಇದರಿಂದ ಪೊಲೀಸ್ ಇಲಾಖೆಗೆ ತೀರಾ ಸಂಕಷ್ಟ ಎದುರಾಗುತ್ತದೆ.

ಪರಿಣಿತ ಅಪರಾಧಿಗಳು ಮೊಬೈಲ್ ನಿಷ್ಕ್ರಿಯ ಮಾಡಿಕೊಂಡೆ ಅವರ ಕೆಲಸ ಮುಗಿಸಿಕೊಂಡು ಹೋದರೆ ಪೊಲೀಸ್ ಇಲಾಖೆಗೆ ತೀರಾ ಕಷ್ಟವಾಗುತ್ತದೆ ಮತ್ತು ಸಾರ್ವಜನಿಕ ಒತ್ತಡ ಹೆಚ್ಚು ಬಂದರೆ ಇಲಾಖೆಗೆ ಕೂಡಾ ಕೆಟ್ಟ ಹೆಸರು.

ರಾಜ್ಯ ಸರಕಾರ ಪೊಲೀಸ್ ಇಲಾಖೆಗೆ ಸಂಚಾರಕ್ಕೆ ಆಧುನಿಕ ವಾಹನ ಮತ್ತು ಸೂಚಿಸಿದ ಆಯಕಟ್ಟಿನ ಜಾಗದಲ್ಲಿ ಪ್ರತೀ ಗ್ರಾಮ ಮಟ್ಟದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದಲ್ಲಿ ಅತೀ ಶೀಘ್ರದಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಿ ಬಂಧಿಸಲು ಸಾಧ್ಯ ಎನ್ನುವುದು ಸಾರ್ವಜನಿಕರ ಬಯಕೆಯಾಗಿದೆ.

ಸರಕಾರ ಪಬ್ಲಿಕ್ ಸೇಫ್ಟಿ ಆ್ಯಕ್ಟ್ ನಂತೆ ಪ್ರತಿ ಒಂದು ಮನೆ , ವಾಣಿಜ್ಯ ಕೇಂದ್ರದಲ್ಲಿ ರಸ್ತೆಯ ಭಾಗಕ್ಕೆ ಸೇರಿದಂತೆ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಕಾನೂನು ಮಾಡಿದೆ. ಅದನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು ಮತ್ತು ಪೊಲೀಸ್ ಇಲಾಖೆ ಅಗತ್ಯ ಕಂಡಲ್ಲಿ ಅದರ ದಾಖಲೆಯನ್ನು ಇಲಾಖೆಗೆ ನೀಡಬೇಕು.ಅನಂತಪದ್ಮನಾಭ, ಪೊಲೀಸ್ ವೃತ್ತ ನೀರೀಕ್ಷಕ, ಬ್ರಹ್ಮಾವರ

ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿಯಾಗಿದ್ದ ಗಿರೀಶ್ ೧೦ ವರ್ಷದ ಹಿಂದೆ ನಮ್ಮಲ್ಲಿ ಬಂದು ಬಾರಕೂರಿನಲ್ಲಿ ಒಂದು ಸಿಸಿ ಟಿವಿ ಅಳವಡಿಸಲು ಸಹಕಾರ ಕೋರಿದರು. ನಾವು ೫ ಮಂದಿ ಸ್ವಂತ ಹಣದಿಂದ ೬೦ ಸಾವಿರ ರೂ ವೆಚ್ಚದಲ್ಲಿ ೪ ಭಾಗದಲ್ಲಿ ಚಿತ್ರ ಸೆರೆ ಬರುವಂತೆ ಸಿಸಿ ಕ್ಯಾಮರಾ ಅಳವಡಿಸಿದ್ದೇವೆ. ಇದು ಕೆಲವೊಂದು ಸಮಯದಲ್ಲಿ ಪೊಲೀಸ್ ಇಲಾಖೆಗೆ ನೆರವಾಗಿದೆ.
ವೆಂಕಟರಮಣ ಭಂಡಾರಕರ್, ಉದ್ಯಮಿ, ಬಾರಕೂರು

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com