ಪರ್ಕಳ : ಇಲ್ಲಿನ ಹೈಸ್ಕೂಲಿನ ಎದುರಿನಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ನಗರ ಸಭೆಯ ಕುಡಿಯುವ ನೀರಿನ ಪೈಪಿನ ದುರಸ್ತಿ ಕಾಮಗಾರಿ ನಡೆದು ತಿಂಗಳು ಕಳೆದರೂ, ಸುಮಾರು 10 ಫೀಟ್ ಉದ್ದ, 10 ಫೀಟ್ ಅಗಲದ ಗುಂಡಿ ಜೆಸಿಬಿಯಿಂದ ತೆಗೆದರೂ ಕಾಮಗಾರಿ ಪೂರ್ಣ ಆದ ನಂತರ ಹೊಂಡ ಮುಚ್ಚಿಸುವ ಗೋಜಿಗೆ ಹೋಗಿಲ್ಲ.
ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿಯೇ ಬೃಹತ್ ಹೊಂಡ ತೆಗೆದು ವಾಹನ ಚಾಲಕರಿಗೆ ಈ ಹೊಂಡ ಅಪಾಯಕ್ಕೆ ಆಹ್ವಾನಿಸಿದಂತಾಗಿದೆ. ಕಾಮಗಾರಿ ಮುಗಿದ ಕೂಡಲೇ ತಕ್ಷಣ ಮುಚ್ಚುವ ಕೆಲಸ ನಗರಸಭೆಯಿಂದ ಆಗಬೇಕೆಂದು ಸ್ಥಳೀಯರಾದ ರಾಜೇಶ್ ಪ್ರಭು ಪರ್ಕಳ ಹಾಗೂಗಣೇಶ್ ರಾಜ್ ಸರಳಬೆಟ್ಟು ನಗರ ಸಭೆಯನ್ನುಒತ್ತಾಯಿಸಿದ್ದಾರೆ
Advertisement. Scroll to continue reading.