ನವದೆಹಲಿ: ಟೋಕಿಯೋದಲ್ಲಿ ನಡೆಯುತ್ತಿರುವಂತ ಕಾಮನ್ ವೆಲ್ತ್ ಗೇಮ್ಸ್ 2022ರ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಸಂದಿದೆ. ಭಾರತದ ವೆಟ್ ಲಿಫ್ಟರ್ ಸಂಕೇತ್ ಸರ್ಗರ್ ಅವರು 55 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ನಲ್ ನಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಫೈನಲ್ ಪಂದ್ಯದ ಮೊದಲ ಸುತ್ತಿನಲ್ಲಿ 107 ಕೆಜಿ, ಎರಡನೇ ಸುತ್ತಿನಲ್ಲಿ 111 ಕೆಜಿ ಭಾರ ಎತ್ತಿದ್ದ ಸಂಕೇತ್ ಕೊನೆಯ ಸುತ್ತಿನಲ್ಲಿ 113 ಕೆಜಿ ಭಾರ ಎತ್ತಿದರು.
ರೋಚಕ ವೇಟ್ ಲಿಫ್ಟಿಂಗ್ ಫೈನಲ್ ಪಂದ್ಯದಲ್ಲಿ ಮಲೇಷ್ಯಾದ ಮೊಹಮ್ಮದ್ ಚಿನ್ನದ ಪದಕ ಗೆದ್ದಿದ್ದಾರೆ. ಶ್ರೀಲಂಕಾದ ಅಥ್ಲೀಟ್ಸ್ ಕಂಚು ಪದಕ ಗೆದ್ದಿದ್ದಾರೆ. ಫೈನಲ್ ಪಂದ್ಯದಲ್ಲಿ 139 ಕೆಜಿ ಭಾರ ಎತ್ತುವ ವೇಳೆ ಸಂಕೇತ್ ಗಾಯಗೊಂಡಿದ್ದು, ಮಲೇಷ್ಯಾದ ಮೊಹಮ್ಮದ್ ಚಿನ್ನ ಗೆದ್ದಿದ್ದಾರೆ.
Advertisement. Scroll to continue reading.