ಬ್ರಹ್ಮಾವರ : ನವ ಕಿರಣ್ ನವತಾರೆ ಸೇವಾ ವೇದಿಕೆ ಮತ್ತು ಮಹಿಳಾ ಕಾಂಗ್ರೆಸ್ ಬ್ರಹ್ಮಾವರ ಇವರ ಜಂಟಿ ಆಶ್ರಯದಲ್ಲಿ ಭಾನುವಾರ ಕಾಂಗ್ರೇಸ್ ಕಛೇರಿಯಲ್ಲಿ ಆಷಾಢ ಮಾಸದ ತಿನಿಸುಗಳ ಕಾರ್ಯಕ್ರಮ ಜರುಗಿತು.
ಸಮಿತಿಯ ಸದಸ್ಯರು ತಯಾರು ಮಾಡಿ ತಂದ ೨೫ ಬಗೆಯ ಗ್ರಾಮೀಣ ಭಾಗದ ತಿನಿಸುಗಳನ್ನು ಬಂದವರೆಲ್ಲ ಸವಿದರು. ಅಕ್ಕಿ ಉಂಡೆ , ಕೆಸುವಿನ ಚಟ್ನಿ , ಪತ್ರೋಡೆ , ಕಣಿಲೆ , ಚಕತೆ ಸೊಪ್ಪು ಚಟ್ನಿ , ತಿಮರೆ ಚಟ್ನಿ ಸೇರಿದಂತೆ ನಾನಾ ಬಗೆಯ ಆಷಾಡ ಮಾಸದ ತಿನಿಸುಗಳು ಇದ್ದವು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗಾಯತ್ರೀ, ಶ್ವೇತ, ಶಖೀರ್ ,ಹರಿಶ್ವಂದ್ರ ಪೂಜಾರಿ , ನವತಾರೆಯರಾದ ಹೇಮಲತಾ, ಅನುರಾಧ,ಮಮತಾ ಶೆಟ್ಟಿ,ಜ್ಯೋತಿ ಶೆಟ್ಟಿ, ಲಕ್ಷ್ಮಿ, ಸರಸ್ವತಿ ನಾಯಕ್, ಶುಭಆಳ್ವ, ಕುಮಾರಿ ಮೇಘನಾ ಶೆಟ್ಟಿ ಖಾದ್ಯ ಗಳನ್ನು ತಯಾರು ಮಾಡಿದ್ದರು.