ಬಾರಕೂರು ಶ್ರೀಕಾಳಿಕಾಂಬಾ ದೇವಸ್ಥಾನದಲ್ಲಿ ಸಾಮೂಹಿಕ ಯಜ್ಞೋಪವೀತಧಾರಣೆ
Published
1
ವರದಿ : ಬಿ.ಎಸ್.ಆಚಾರ್ಯ
ಬಾರ್ಕೂರು : ಇಂದು ಋಗುಉಪಾಕರ್ಮದ ಅಂಗವಾಗಿ ವಿಶ್ವ ಬ್ರಾಹ್ಮಣ ಸಮಾಜಭಾಂಧವರು ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಸಾಮೂಹಿಕ ಯಜ್ಞೋಪವೀತ ಧಾರಣೆ ಮಾಡಿದರು.
ದೇವಸ್ಥಾನದ ವಿದ್ವಾನ್ ಪ್ರಕಾಶ್ ಪುರೋಹಿತ್ ಉತ್ಸರ್ಜನ ಉಪಾಕರ್ಮ ಹೋಮದೊಂದಿಗೆ ಪಂಚ ಋಷಿ, ಸಪ್ತ ಋಷಿಗಳ ಆವಾಹನೆಯೊಂದಿಗೆ ದೇವತರ್ಪಣ, ಋಷಿ ತರ್ಪಣ, ಪಿತೃ ತರ್ಪಣದೊಂದಿಗೆ ಯಜ್ಞ ಕಾರ್ಯ ನೆರವೇರಿಸಿದರು.
ನೂತನ ವಟುಗಳಿಗೆ ವಿಷೇಶ ಧಾರ್ಮಿಕ ಪೂಜಾ ಕಾರ್ಯಕ್ರಮ ಜರುಗಿತು. ನೂರಾರು ಮಂದಿ ಉಪಾಕರ್ಮದಲ್ಲಿ ಭಾಗವಹಿಸಿದರು.
ದೇವಸ್ಥಾನದ ಆಡಳಿತ ಮೋಕ್ತೇಸರ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ, ಪ್ರವೀಣ ಆಚಾರ್ಯ ರಂಗನಕೆರೆ, ರವಿ ಆಚಾರ್ಯ ಕೆಳಾರ್ಕಳ ಬೆಟ್ಟು, ದೇವಸ್ಥಾನದ, ಇನ್ನಿತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.